HomeBeautyಈ ಸುಲಭದ ಫೇಸ್ ಪ್ಯಾಕ್ ಹೆಚ್ಚಿಸುತ್ತೆ ತ್ವಚೆ ಸೌಂದರ್ಯ

ಈ ಸುಲಭದ ಫೇಸ್ ಪ್ಯಾಕ್ ಹೆಚ್ಚಿಸುತ್ತೆ ತ್ವಚೆ ಸೌಂದರ್ಯ

ಮಹಿಳೆಯರು ಸುಂದರ ತ್ವಚೆ ಪಡೆಯಲು ಫೇಶಿಯಲ್ ಮೊರೆ ಹೋಗುವುದು ಸಾಮಾನ್ಯ. ಅದಕ್ಕಾಗಿ ಪದೇ ಪದೇ ಬ್ಯೂಟಿ ಪಾರ್ಲರ್ ಗೆ ಹೋಗಲು ಸಾದ್ಯವಾಗುವುದಿಲ್ಲ. ಆಗ ಮನೆಯಲ್ಲೇ ಸುಲಭವಾಗಿ ಕೆಲವು ಫೇಸ್ ಪ್ಯಾಕ್ ಬಳಸಿ ಸುಂದರ ತ್ವಚೆಯನ್ನು ಪಡೆಯಬಹುದಾಗಿದೆ.

ಹೆಚ್ಚು ಜನರ ಚರ್ಮ ಜಿಡ್ಡಿನಂಶದಿಂದ ಕೂಡಿರುತ್ತದೆ, ಅಂತವರು ಈ ಫೇಸ್ ಪ್ಯಾಕ್ ನ್ನು ಬಳಸಬಹುದು. ಓಟ್ ಮೀಲ್ ಗೆ ನಿಂಬೆ ರಸ ಅಥವಾ ಕಿತ್ತಳೆ ರಸ ಬೆರೆಸಿ ಪೇಸ್ಟ್ ತಯಾರಿಸಿ ಮುಖಕ್ಕೆ ಲೇಪಿಸಿ 20 ನಿಮಿಷದ ಬಳಿಕ ತೊಳೆದರೆ ಉತ್ತಮ ಫಲಿತಾಂಶ ದೊರೆಯುತ್ತದೆ.

2 ಚಮಚ ಗಟ್ಟಿ ಮೊಸರು, ಅರ್ಧ ಚಮಚ ನಿಂಬೆರಸ ಬೆರೆಸಿ ಇದನ್ನು ಮುಖಕ್ಕೆ ಹಚ್ಚಿ 15 ನಿಮಿಷದ ನಂತರ ತೊಳೆದರೆ ಚರ್ಮ ಕಾಂತಿಯುತವಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಂದು ಮೊಟ್ಟೆಯ ಬಿಳಿ ಭಾಗ ಮತ್ತು 2 ಚಮಚ ಹಾಲಿನ ಪುಡಿ ಹಾಗೂ 2 ಚಮಚ ಸೌತೆಕಾಯಿ ರಸ ಬೆರೆಸಿ ಚೆನ್ನಾಗಿ ಮಿಶ್ರ ಮಾಡಿ ಮುಖಕ್ಕೆ ಲೇಪಿಸಿ 30 ನಿಮಿಷದ ಬಳಿಕ ತೊಳೆದರೆ ಅಂದದ ತ್ವಚೆ ನಿಮ್ಮದಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular