HomeAstroಈ ಕನಸು ನೀಡುತ್ತೆ 'ಧನ ಲಾಭ'ದ ಸಂಕೇತ

ಈ ಕನಸು ನೀಡುತ್ತೆ ‘ಧನ ಲಾಭ’ದ ಸಂಕೇತ

ಸ್ವಪ್ನ ಎಲ್ಲರಿಗೂ ಬೀಳುತ್ತದೆ. ಕೆಲ ಸ್ವಪ್ನ ಒಳ್ಳೆ ಭವಿಷ್ಯದ ಮುನ್ಸೂಚನೆಯಾದ್ರೆ ಮತ್ತೆ ಕೆಲ ಭವಿಷ್ಯ ದೌರ್ಭಾಗ್ಯದ ಸಂಕೇತವಾಗಿರುತ್ತದೆ. ಕೆಲವೊಂದು ಸ್ವಪ್ನ ಧನ ಲಾಭದ ಸೂಚನೆ ನೀಡುತ್ತದೆ. ನಿಮಗೂ ಇಂಥ ಸ್ವಪ್ನ ಬಿದ್ದಲ್ಲಿ ಸದ್ಯದಲ್ಲಿಯೇ ಧನ ಲಾಭ ಗ್ಯಾರಂಟಿ.

ಸ್ವಪ್ನದಲ್ಲಿ ಬೆಂಕಿ ಪೊಟ್ಟಣದಿಂದ ಬೆಂಕಿ ಹಚ್ಚಿದಂತೆ ಕಂಡು ಬಂದಲ್ಲಿ ಶೀಘ್ರದಲ್ಲಿಯೇ ಧನ ಲಾಭವಾಗಲಿದೆ ಎಂದರ್ಥ.

ಕನಸಿನಲ್ಲಿ ಯಾರಿಗಾದ್ರೂ ಹಣ ನೀಡಿದಂತೆ ಕಂಡು ಬಂದಲ್ಲಿ ಆದಷ್ಟು ಬೇಗ ನೀವು ನೀಡಿದ ಸಾಲ ನಿಮಗೆ ವಾಪಸ್ ಬರಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ವಪ್ನದಲ್ಲಿ ವಜ್ರ, ಚಿನ್ನದ ಪಾತ್ರೆ ಕಂಡು ಬಂದಲ್ಲಿ ಮನೆಯಲ್ಲಿ ಲಕ್ಷ್ಮಿ ನೆಲೆಸುವ ಸಂಕೇತವಾಗಿರುತ್ತದೆ.

ಕನಸಿನಲ್ಲಿ ಚೆಕ್ ನೀಡಿದಂತೆ ಕಂಡು ಬಂದಲ್ಲಿ ವಾಸ್ತವದಲ್ಲಿ ಹಣ ಪ್ರಾಪ್ತಿಯಾಗುತ್ತದೆ.

ಕುಂಬಾರ ಮಡಿಕೆ ಮಾಡಿದಂತೆ ಸ್ವಪ್ನ ಬಿದ್ದಲ್ಲಿ ಧನ ಲಾಭದ ಯೋಗವಿದೆ ಎಂದರ್ಥ.

ಬಲಗೈಗೆ ಬಿಳಿ ಹಾವು ಕಚ್ಚಿದಂತೆ ಕಂಡು ಬಂದಲ್ಲಿ ಸಂಪತ್ತು ಪ್ರಾಪ್ತಿಯಾಗಲಿದೆ.

ಕನಸಿನಲ್ಲಿ ಹೂ ಹಾಗೂ ಹಣ್ಣನ್ನು ತಿಂದಂತೆ ಕಂಡು ಬಂದಲ್ಲಿ ಕೂಡ ಧನ ಲಾಭವಾಗುತ್ತದೆ ಎಂದರ್ಥ.

ಕನಸಿನಲ್ಲಿ ಚಿನ್ನ ಅಥವಾ ಅಮೂಲ್ಯ ವಸ್ತು ಕಂಡಲ್ಲಿ ಇದ್ದಕ್ಕಿದ್ದಂತೆ ಹಣ ಸಿಗಲಿದೆ ಎಂಬುದರ ಸಂಕೇತ.

For Latest News Updates, Join Our Whatsapp Community🚩
RELATED ARTICLES

Most Popular