ವಿಡಿಯೋ: ಹೆಬ್ಬಾವು ಮತ್ತು ಕೊಮೊಡೋ ಡ್ರಾಗನ್ ಜಟಾಪಟಿ

ವನ್ಯ ಜಗತ್ತಿನಲ್ಲಿ ಪ್ರಾಣಿಗಳ ಕಾಳಗಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಬಲು ಬೇಗ ಹಿಟ್ ಆಗುತ್ತವೆ.

ಹೆಬ್ಬಾವು ಹಾಗೂ ಕೊಮೊಡೋ ಡ್ರಾಗನ್‌ಗಳ ಕಾಳಗವೊಂದರ ವಿಡಿಯೋವನ್ನು ಬಿಗ್ ಕ್ಯಾಟ್ಸ್ ಇಂಡಿಯಾ ಹೆಸರಿನ ಇನ್‌ಸ್ಟಾಗ್ರಾಂ ಪೇಜ್ ಒಂದು ಶೇರ್‌ ಮಾಡಿದೆ. ಎರಡೂ ಜೀವಿಗಳು ಜಿದ್ದಾಜಿದ್ದಿಯ ಕಾಳಗದಲ್ಲಿದ್ದು, ಯಾರೊಬ್ಬರೂ ಸೋಲುವಂತೆ ಕಾಣುತ್ತಿಲ್ಲ.

ಮೊದಲಿಗೆ ಹೆಬ್ಬಾವು ಮೇಲುಗೈಯಾದಂತೆ ಕಂಡರೂ ಸಹ ಕೊಮೊಡೋ ಡ್ರಾಗನ್‌‌ ಹೆಬ್ಬಾವಿನ ಕುತ್ತಿಗೆಗೆ ಗಾಯ ಮಾಡುವ ಮೂಲಕ ಕಾಳಗದಲ್ಲಿ ಮತ್ತೆ ಎದ್ದು ಬರುತ್ತದೆ. ಹೆಬ್ಬಾವಿನ ಬಲವಾದ ಹಿಡಿತ ಹಾಗೂ ಕೊಮೊಡೋ ಡ್ರಾಗನ್‌ನ ಬಲವಾದ ದವಡೆಗಳು ಈ ಕಾಳಗವನ್ನು ಬಹಳ ಕಾಲ ಮುನ್ನಡೆಸಿಕೊಂಡು ಸಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read