ಸ್ತನ ಕಸಿ ಮಾಡಿಸಿಕೊಳ್ಳಲು ಮುಂದಾಗಿದ್ದಾಳೆ ಈ ಬಿಂದಾಸ್‌ ನಟಿ..…!

ತುಂಡು ಬಟ್ಟೆ ಧರಿಸಿ ಸದಾ ಸುದ್ದಿಯಲ್ಲಿರುವ ನಟಿ ಉರ್ಫಿ ಜಾವೇದ್‌ ಈಗ ಮತ್ತೊಂದು ಸಾಹಸಕ್ಕೆ ಕೈಹಾಕಿದ್ದಾಳೆ. ಉರ್ಫಿಯ ಉಡುಪುಗಳ ಬಿಟೌನ್‌ನಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿವೆ. ಅರೆಬರೆ ಬಟ್ಟೆಯಲ್ಲಿ ಕಾಣಿಸಿಕೊಳ್ಳೋ ಉರ್ಫಿ ಸಾಮಾಜಿ ಜಾಲತಾಣಗಳಲ್ಲೂ ಚರ್ಚೆಯಲ್ಲಿರುತ್ತಾಳೆ. ಇದೀಗ ಉರ್ಫಿ ಸ್ತನ ಕಸಿ ಮಾಡಿಸಿಕೊಳ್ಳಲು ಚಿಂತನೆ ನಡೆಸಿದ್ದಾಳೆ.

ಉರ್ಫಿಗೆ ಸ್ತನಗಳ ಶಸ್ತ್ರಚಿಕಿತ್ಸೆ ಯಾವಾಗ ಎಂಬುದು ಖಚಿತವಾಗಿಲ್ಲ. ಆದರೆ ಆಕೆ ಸ್ತನಗಳ ಗಾತ್ರ ಹಿಗ್ಗಿಸಿಕೊಳ್ಳುತ್ತಿರುವ ಸಂಗತಿ ಎಲ್ಲೆಡೆ ಕೇಳಿಬರ್ತಿದೆ. ಉರ್ಫಿಗೆ ಸುಂದರವಾಗಿ ಕಾಣಬೇಕೆಂಬ ಗೀಳು ಎಷ್ಟಿದೆ ಎಂಬುದಕ್ಕೆ ಇದೇ ಸಾಕ್ಷಿ. ಸ್ತನಗಳ ಕಸಿ ಎಂದರೇನು? ಇದಕ್ಕೆ ಎಷ್ಟು ವೆಚ್ಚವಾಗುತ್ತದೆ ಎಂಬುದನ್ನೆಲ್ಲ ನೋಡೋಣ.

ಸ್ತನಗಳ ಇಂಪ್ಲಾಂಟ್ ಒಂದು ರೀತಿಯ ಪ್ಲಾಸ್ಟಿಕ್ ಸರ್ಜರಿ. ಸ್ತನ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮೂಲಕ ಅನೇಕರು ಸ್ತನಗಳ ಗಾತ್ರವನ್ನು ಹೆಚ್ಚಿಸಿಕೊಳ್ಳುತ್ತಾರೆ. ಆದರೆ ಇದು ಅತ್ಯಂತ ಸೂಕ್ಷವಾದ ಮತ್ತು ಅಪಾಯಕಾರಿ ಪ್ರಕ್ರಿಯೆ.

ಶಸ್ತ್ರಚಿಕಿತ್ಸೆಯ ಮೂಲಕ ಕೃತಕ ಸಾಧನಗಳನ್ನು ಸ್ತನಗಳಿಗೆ ಸೇರಿಸಲಾಗುತ್ತದೆ. ಸಿಲಿಕಾನ್‌ ಜೆಲ್ ಅಥವಾ ಸಲೈನ್‌ನಿಂದ ತುಂಬಿದ ಸಿಲಿಕಾನ್‌ ಚಿಪ್ಪುಗಳನ್ನು ಅಳವಡಿಸುವ ಪ್ರಕ್ರಿಯೆ ಇದು. ಕ್ಯಾನ್ಸರ್‌ನಿಂದ ಸ್ತನಗಳನ್ನು ಕಳೆದುಕೊಂಡವರು ಕೂಡ ಈ ರೀತಿಯ ಕಸಿ ಮಾಡಿಸಿಕೊಳ್ಳಬಹುದು. ಸ್ತನಗಳ ಗಾತ್ರ ಅಥವಾ ಆಕಾರವನ್ನು ಬದಲಾಯಿಸಲು ಬಯಸುವವರು ಸಹ ಇದನ್ನು ಮಾಡಿಸಿಕೊಳ್ಳುತ್ತಾರೆ. ಸ್ತನ ವೃದ್ಧಿಯನ್ನು ಬೂಬ್ ಜಾಬ್ ಎಂದೂ ಕರೆಯುತ್ತಾರೆ. ಯಾವುದೇ ರೀತಿಯ ದೈಹಿಕ ಸಮಸ್ಯೆಗಳಿದ್ದಲ್ಲಿ ಸ್ತನ ಕಸಿ ಮಾಡಿಸಿಕೊಳ್ಳುವುದು ಅಪಾಯಕಾರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read