HomeIndiaVideo: ಮೃತ ಪತ್ನಿಯದ್ದೂ ಸೇರಿದಂತೆ 22 ಮತಗಳನ್ನು ಚಲಾಯಿಸಿದ್ದಾನಂತೆ ಈ ಭೂಪ....!

Video: ಮೃತ ಪತ್ನಿಯದ್ದೂ ಸೇರಿದಂತೆ 22 ಮತಗಳನ್ನು ಚಲಾಯಿಸಿದ್ದಾನಂತೆ ಈ ಭೂಪ….!

ಇತ್ತೀಚೆಗೆ ನಡೆದ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ತನ್ನ ಮೃತ ಪತ್ನಿಯದ್ದೂ ಸೇರಿದಂತೆ ವಿವಿಧ ಬೂತ್‌ ಗಳಲ್ಲಿ ತಾನು ಒಟ್ಟು 22 ಮತಗಳನ್ನು ಚಲಾಯಿಸಿರುವುದಾಗಿ ವ್ಯಕ್ತಿಯೊಬ್ಬ ಸಂದರ್ಶನದಲ್ಲಿ ಹೇಳಿಕೊಂಡಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.

ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ 22 ಓಟು ಹಾಕಿದ್ದೇನೆಂದು ಹೇಳುತ್ತಿರುವ ವ್ಯಕ್ತಿ ಈ ವಿಷಯ ಹೇಳಿಕೊಂಡಿದ್ದು, ಜೊತೆಗೆ ಮೋದಿ ಸರ್ಕಾರವಿದ್ದರೆ ಎಲ್ಲವೂ ಸಾಧ್ಯ ಎಂದು ಹೇಳಿದ್ದಾನೆ. ಆತನ ಸಂದರ್ಶನದ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಆದರೆ ಆತನ ಹೇಳಿಕೆಯನ್ನು ಬಹುತೇಕರು ತಳ್ಳಿ ಹಾಕಿದ್ದು, ತನ್ನ ಮೃತ ಪತ್ನಿಯ ಓಟನ್ನು ಆತ ಚಲಾವಣೆ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಆದರೆ ಮತ್ತಷ್ಟು ಮಂದಿ, ಚುನಾವಣೋತ್ತರ ಸಮೀಕ್ಷೆಗಳೆಲ್ಲವೂ ಕಾಂಗ್ರೆಸ್‌ ಗೆಲ್ಲುತ್ತದೆ ಎಂದು ಹೇಳಿದ್ದರ ಮಧ್ಯೆ ಬಿಜೆಪಿ ಬಹುಮತ ಗಳಿಸಿದ್ದು ಹೇಗೆ ? ಹೀಗಾಗಿ ಆತ ಹೇಳುತ್ತಿರುವುದು ನಿಜವಿರಬಹುದು. ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮ ನಡೆದಿರಬಹುದು ಎಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular