HomeHealthʼಎಲೆಕೋಸುʼ ಸೇವಿಸುವುದರಿಂದ ಇದೆ ಈ ಪ್ರಯೋಜನ

ʼಎಲೆಕೋಸುʼ ಸೇವಿಸುವುದರಿಂದ ಇದೆ ಈ ಪ್ರಯೋಜನ

ಕ್ಯಾಬೇಜ್ ನಿಂದ ಪಲ್ಯ ಸಾಂಬಾರು, ಪಕೋಡ ಮಾಡಬಹುದು. ಈ ತರಕಾರಿ ವರ್ಷದ ಎಲ್ಲ ಸಮಯದಲ್ಲೂ ದೊರೆಯುತ್ತದೆ. ಈ ತರಕಾರಿಯನ್ನು ಆರೋಗ್ಯಕ್ಕೆ ಅಷ್ಟೇ ಬಳಸುವುದಲ್ಲದೆ ಸೌಂದರ್ಯ ವರ್ಧಕಗಳಾಗಿ ಬಳಕೆ ಮಾಡುತ್ತಾರೆ.

ದೇಹಕ್ಕೆ ವಿಟಮಿನ್ ಗಳನ್ನು ಕ್ಯಾಬೇಜ್ ಪೂರೈಸುತ್ತದೆ. ಇದರಲ್ಲಿ ನಾರಿನಾಂಶ ಕಾರ್ಬೋ ಹೈಡ್ರೇಟ್, ಮ್ಯಾಗ್ನಿಷಿಯಂ, ಪೊಟ್ಯಾಷಿಯಂ, ಫೈಬರ್, ಐರನ್, ಕಬ್ಬಿಣ, ಸೋಡಿಯಂ ಅಂಶಗಳು ಸಾಕಷ್ಟು ಪ್ರಮಾಣದಲ್ಲಿದೆ.

ಕ್ಯಾಬೇಜ್ ನಲ್ಲಿ ಬೀಟಾ ಕೆರೋಟಿನ್ ಅಂಶ ಇರುವುದರಿಂದ ಕಣ್ಣಿನ ದೃಷ್ಟಿಗೆ ತುಂಬಾ ಉತ್ತಮವಾಗಿದೆ. ಇದನ್ನು ನಿಯಮಿತವಾಗಿ ಬಳಸುವುದರಿಂದ ಕಣ್ಣಿನ ಪೊರೆ ಆಗುವುದನ್ನು ತಡೆಯಬಹುದು. ಮಲಬದ್ಧತೆ ಸಮಸ್ಯೆ ಇರುವವರು ಕೂಡ ಇದನ್ನು ಸೇವಿಸಬಹುದು. ಇದು ಆಹಾರ ಬೇಗ ಜೀರ್ಣವಾಗಲು ಸಹಾಯ ಮಾಡುತ್ತದೆ. ಎಲೆಕೋಸಿನಲ್ಲಿ ವಿಟಮಿನ್ ಸಿ ಅಂಶ ಹೇರಳವಾಗಿ ಇರುವುದರಿಂದ ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular