ತಾವೇ ಬರೆದ ಪುಸ್ತಕ ಓದುತ್ತಿರುವ ಮಹಿಳೆ ಪಕ್ಕ ಕೂತ ಲೇಖಕ: ಅಪೂರ್ವ ಅನುಭವ ಹಂಚಿಕೊಂಡ ಬರಹಗಾರ

ನೀವು ಮಾಡಿದ ಒಳ್ಳೆಯ ಕೆಲಸವನ್ನು ಯಾರಾದರೂ ಗುರುತಿಸಿದಾಗ ಅಥವಾ ಪ್ರಶಂಸಿಸಿದಾಗ ಅದಕ್ಕಿಂತ ಅತ್ಯುತ್ತಮ ಭಾವನೆ ಬೇರೆ ಇಲ್ಲ ಅಲ್ಲವೇ? ಜೋಸೆಫ್ ಫಾಸಾನೊ ಎಂಬ ಅಮೇರಿಕನ್ ಲೇಖಕನೊಂದಿಗೆ ಇದೇ ರೀತಿಯ ಘಟನೆ ಸಂಭವಿಸಿದೆ. ಅದನ್ನು ಅವರು ಶೇರ್​ ಮಾಡಿಕೊಂಡಿದ್ದಾರೆ.

ಇವರು ಬರೆದ ಪುಸ್ತಕವನ್ನೇ ಓದುತ್ತಿದ್ದ ಮಹಿಳೆಯ ಪಕ್ಕದಲ್ಲಿ ತಾವು ಆಕಸ್ಮಿಕವಾಗಿ ಕುಳಿತುಕೊಂಡಿದ್ದ ಬಗ್ಗೆ ಆದ ಅನುಭವವನ್ನು ಅವರು ಶೇರ್​ ಮಾಡಿಕೊಂಡಿದ್ದಾರೆ. ಜೋಸೆಫ್ ಫಾಸಾನೊ ಅವರು ಬರೆದ “ದಿ ಸ್ವಾಲೋಸ್ ಆಫ್ ಲುನೆಟ್ಟೊ” ಪುಸ್ತಕವನ್ನು ವಿಮಾನದಲ್ಲಿ ಮಹಿಳೆಯೊಬ್ಬರು ಓದುತ್ತಿದ್ದರು. ಅಚ್ಚರಿಯ ಸಂಗತಿ ಎಂದರೆ ತಾವು ಆ ಮಹಿಳೆಯ ಪಕ್ಕದಲ್ಲಿ ಕುಳಿತುಕೊಂಡಿದ್ದು. ಆಕೆ ಅದನ್ನು ಅಷ್ಟು ಮಗ್ನವಾಗಿ ಓದುತ್ತಿದ್ದುದನ್ನು ನೋಡಿ ತುಂಬಾ ಖುಷಿಯಾಯಿತು ಎಂದು ಹಂಚಿಕೊಂಡಿದ್ದಾರೆ.

ಈ ಕಾದಂಬರಿ ಬರೆದಿರುವುದು ತಾವೇ ಎಂದು ಹೇಳಲಿಲ್ಲ. ಬದಲಿಗೆ ಈ ಕಾದಂಬರಿಯ ಅನಿಸಿಕೆಯನ್ನು ಮಹಿಳೆಯಲ್ಲಿ ಕೇಳಿದಾಗ ಆಕೆ ತುಂಬಾ ಹೊಗಳಿದರು. ಅಸಲಿಗೆ ಅವರಿಗೆ ಲೇಖಕ ನಾನೇ ಎಂದು ತಿಳಿದಿರಲಿಲ್ಲ. ಇದೊಂದು ರೀತಿಯಲ್ಲಿ ವರ್ಣಿಸಲಾಗದ ಅನುಭೂತಿ ಎಂದಿದ್ದಾರೆ. ಇದಕ್ಕೆ ಹಲವಾರು ರೀತಿಯ ಕಮೆಂಟ್​ ಬರುತ್ತಿದ್ದು, ಇದಕ್ಕಿಂತ ಜೀವನದಲ್ಲಿ ಬೇರೊಂದು ಖುಷಿ ಎಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

https://twitter.com/Joseph_Fasano_/status/1628223577030815746?ref_src=twsrc%5Etfw%7Ctwcamp%5Etweetembed%7Ctwterm%5E1628223577030815746%7Ctwgr%5E89c2e8b96dfc4523d23cd472d1b546077561effc%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fthis-author-was-seated-beside-a-woman-who-was-reading-his-book-on-a-flight-and-then-2338590-2023-02-23

https://twitter.com/Joseph_Fasano_/status/1628224875369271296?ref_src=twsrc%5Etfw%7Ctwcamp%5Etweetembed%7Ctwterm%5E1628224875369271296%7Ctwgr%5E89c2e8b96dfc4523d23cd472d1b546077561effc%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fthis-author-was-seated-beside-a-woman-who-was-reading-his-book-on-a-flight-and-then-2338590-2023-02-23

https://twitter.com/LydiaHarvey/status/1628237904228274177?ref_src=twsrc%5Etfw%7Ctwcamp%5Etweetembed%7Ctwterm%5E1628237904228274177%7Ctwgr%5E89c2e8b96dfc4523d23cd472d1b546077561effc%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fthis-author-was-seated-beside-a-woman-who-was-reading-his-book-on-a-flight-and-then-2338590-2023-02-23

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read