HomeLatest Newsಯೋಚಿಸಿ ಒಮ್ಮೆ ನೆಗೆಟಿವ್ ಕಮೆಂಟ್ ಮಾಡುವ ಮುನ್ನ

ಯೋಚಿಸಿ ಒಮ್ಮೆ ನೆಗೆಟಿವ್ ಕಮೆಂಟ್ ಮಾಡುವ ಮುನ್ನ

ಇನ್ನೊಬ್ಬರ ಬಗ್ಗೆ ಮಾತನಾಡುವುದಕ್ಕೆ ನಮ್ಮ ನಾಲಿಗೆ ಯಾವತ್ತೂ ಮುಂದಿರುತ್ತದೆ. ಆದರೆ ನಮ್ಮ ಕಾಮೆಂಟ್ ನಿಂದ ಅವರ ಮನಸ್ಸಿನ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂಬುದನ್ನು ಯಾವತ್ತಾದರೂ ಯೋಚನೆ ಮಾಡಿದ್ದೀರಾ…?

ಯಾರಾದರೂ ದಪ್ಪಗೆ ಇದ್ದಾಗ, ಸಣ್ಣಕ್ಕೆ ಇದ್ದಾಗ ಅವರ ಬಗ್ಗೆ ನೆಗೆಟಿವ್ ಆಗಿ ಕಾಮೆಂಟ್ ಮಾಡುವುದು, ಅವರ ರೂಪ, ಬಣ್ಣದ ಕುರಿತು ಟೀಕಿಸುವುದನ್ನು ಮಾಡುತ್ತೇವೆ. ಆದರೆ ಅವರಿಗೆ ಯಾವುದೋ ಆರೋಗ್ಯ ಸಮಸ್ಯೆಯಿಂದ ದೇಹದಲ್ಲಿ ವ್ಯತ್ಯಾಸ ಕಾಣಿಸಿಕೊಂಡಿರುತ್ತದೆ. ಇದನ್ನು ಗಮನಿಸದೇ ಅವರ ಬಗ್ಗೆ ಇನ್ನೊಬ್ಬರ ಜತೆ ಆಡಿಕೊಳ್ಳುವುದನ್ನು ಮಾಡಬೇಡಿ. ಇದರಿಂದ ಅವರ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. ಅವರ ಆತ್ಮವಿಶ್ವಾಸ ಕುಂದುತ್ತದೆ.

ಇನ್ನು ನೆಗೆಟಿವ್ ಕಾಮೆಂಟ್ ಅನ್ನು ಕೆಲವರು ಸುಲಭದಲ್ಲಿ ತೆಗೆದುಕೊಳ್ಳುತ್ತಾರೆ. ಇನ್ನು ಕೆಲವರು ಇದರಿಂದ ಖಿನ್ನತೆಗೆ ಒಳಗಾಗಿ ಜೀವಕ್ಕೆ ಕುತ್ತು ತಂದುಕೊಳ್ಳುತ್ತಾರೆ. ನಾವಾಡುವ ಮಾತು ಇನ್ನೊಬ್ಬರ ಮನಸ್ಸಿಗೆ ಖುಷಿ ನೀಡಬೇಕೆ ಹೊರತು ಅವರ ಜೀವಕ್ಕೆ ಆಪತ್ತು ತರಬಾರದು. ಹಾಗಾಗಿ ಇನ್ನೊಬ್ಬರ ಕುರಿತು ನೆಗೆಟಿವ್ ಆಗಿ ಮಾತನಾಡುವ ಮೊದಲು ಯೋಚಿಸಿ ಮಾತನಾಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular