ದಾವಣಗೆರೆ: ಪೊಲೀಸ್ ಹೆಡ್ ಕಾನ್ಸ್ಟೇಬಲ್ ಮನೆಯಲ್ಲಿಯೇ ಕಳ್ಳತನವಾಗಿರುವ ಘಟನೆ ದಾವಣಗೆರೆ ಜಿಲ್ಲೆ ಹರಿಹರದ ವಿದ್ಯಾನಗರದಲ್ಲಿ ನಡೆದಿದೆ. ಈ ಕುರಿತು ಹರಿಹರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಜಯನಾಯ್ಕ್ ಎಸ್.ಎಲ್. ಅವರ ಮನೆಯಲ್ಲಿ ಕಳ್ಳತನ ನಡೆಸಲಾಗಿದೆ. 4.80 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, 5 ಸಾವಿರ ರೂಪಾಯಿ ನಗದು ಕಳವು ಮಾಡಲಾಗಿದೆ.
ಯುಗಾದಿ ಹಬ್ಬದ ನಿಮಿತ್ತ ಕುಟುಂಬದವರು ಮಾರ್ಚ್ 29 ರಂದು ಊರಿಗೆ ಹೋಗಿದ್ದರು. ಜಯನಾಯ್ಕ್ ಮನೆಗೆ ಬೀಗ ಹಾಕಿ ರಾತ್ರಿ ಪಾಳಿಯ ಕೆಲಸಕ್ಕೆ ಹೋಗಿದ್ದು, ಮರುದಿನ ಬೆಳಗ್ಗೆ 9:30ಕ್ಕೆ ಮನೆಗೆ ಬಂದಾಗ ಗೇಟ್ ಹಾಗೂ ಬಾಗಿಲಿನ ಇಂಟರ್ಲಾಕ್ ಒಡೆದು ಕಳವು ಮಾಡಿರುವುದು ಗಮನಕ್ಕೆ ಬಂದಿದೆ.
ಮನೆಯಲ್ಲಿದ್ದ ಒಟ್ಟು 60.5 ಗ್ರಾಂ ತೂಕದ ಚಿನ್ನದ ಸರ, ಉಂಗುರ, ಬ್ರಾಸ್ಲೈಟ್, ಕಿವಿ ಓಲೆ ಸೇರಿ ಒಡವೆ ಮತ್ತು ನಗದು ಕಳವು ಮಾಡಲಾಗಿದೆ.