HomeLatest NewsBREAKING: ಕಳ್ಳತನ ಮಾಡಲು ಪಿಜಿಗೆ ನುಗ್ಗಿದ ಕಿರಾತಕನಿಂದ ಯುವತಿಗೆ ಲೈಂಗಿಕ ಕಿರುಕುಳ

BREAKING: ಕಳ್ಳತನ ಮಾಡಲು ಪಿಜಿಗೆ ನುಗ್ಗಿದ ಕಿರಾತಕನಿಂದ ಯುವತಿಗೆ ಲೈಂಗಿಕ ಕಿರುಕುಳ

ಬೆಂಗಳೂರು: ಕಳ್ಳತನ ಮಾಡಲು ಪಿಜಿಗೆ ನುಗ್ಗಿದ ಕಿರಾತಕ ಯುವತಿ ಮೇಲೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಸುದ್ದಗುಂಟೆಪಾಳ್ಯದ ಬಳಿಯಿರುವ ಪಿಜಿಗೆ ನುಗ್ಗಿದ ಕಳ್ಳ, ಕೊಠಡಿಯಲ್ಲಿ ಮಲಗಿದ್ದ ಯುವತಿಯ ಮೈ-ಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಯುವತಿ ಪ್ರತಿರೋಧಿಸುತ್ತಿದ್ದಂತೆ 2,500 ರೂಪಾಯಿ ಎಗರಿಸಿ ಎಸ್ಕೇಪ್ ಆಗಿದ್ದಾನೆ.

ಘಟನೆ ಬಗ್ಗೆ ಯುವತಿ ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ದೂರು ನೀಡಿದ್ದಾರೆ. ಆರೋಪಿ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular