SHOCKING : ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಕನ ತಳ್ಳಿ ಮೊಬೈಲ್ ಕದ್ದ ಕಳ್ಳ : ಹಳಿ ಮೇಲೆ ಬಿದ್ದು ಕಾಲು ಪುಡಿ ಪುಡಿ.!

ಕಳ್ಳನೋರ್ವ ಪ್ರಯಾಣಿಕನನ್ನು ತಳ್ಳಿ ಮೊಬೈಲ್ ಕದ್ದು ಪರಾರಿಯಾಗಿದ್ದು, ರೈಲಿನಿಂದ ಕೆಳಗೆ ಬಿದ್ದ ಪ್ರಯಾಣಿಕ ಕಾಲು ಕಳೆದುಕೊಂಡಿದ್ದಾನೆ.

ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಸೋಮವಾರ ಈ ನಡೆದಿದೆ. ಸೆಂಟ್ರಲ್ ರೈಲ್ವೆ ಮಾರ್ಗದ ಶಹಾದ್ ಮತ್ತು ಅಂಬಿವಲಿ ನಿಲ್ದಾಣಗಳ ನಡುವೆ ಈ ಘಟನೆ ಸಂಭವಿಸಿದ್ದು, ಗೌರವ್ ನಿಕಮ್ ಎಂಬ ವ್ಯಕ್ತಿ ರೈಲಿನ ಬಾಗಿಲಲ್ಲಿ ಕುಳಿತಿದ್ದಾಗ ಕಳ್ಳನು ಅವನ ಫೋನ್ ಕದ್ದಿದ್ದಾನೆ . ರೈಲಿನ ಬಾಗಿಲಿನ ಬಳಿ ಕುಳಿತಿದ್ದಾಗ ಕಳ್ಳ ಮೊಬೈಲ್ ಫೋನ್ ಕಸಿದು ಓಡಿಹೋಗಿದ್ದಾನೆ. ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಪ್ರಯಾಣಿಕ ಗೌರವ್ ನಿಕಮ್ ಕಾಲು ಫುಡಿ ಫುಡಿಯಾಗಿದ್ದು, ಕಳ್ಳ ಮಾಡಿದ ತಪ್ಪಿಗೆ ಈತ ತನ್ನ ಕಾಲನ್ನೇ ಕಳೆದುಕೊಂಡಿದ್ದಾನೆ.

“ಯಾರೋ ನನ್ನ ಕೈಯನ್ನು ಎಳೆದುಕೊಂಡು ಫೋನ್ ಕಸಿದುಕೊಂಡರು, ಮತ್ತು ನಾನು ಬಿದ್ದೆ” ಎಂದು ನಿಕಮ್ ಹೇಳಿದರು. ಹಿಡಿತ ತಪ್ಪಿ ಹಳಿಗಳ ಮೇಲೆ ಬಿದ್ದೆನು ಎಂದು ಆತ ಹೇಳಿದ್ದಾನೆ.ಘಟನೆಯಲ್ಲಿ ಎರಡೂ ಕಾಲುಗಳಿಗೆ ಗಂಭೀರ ಗಾಯವಾಗಿದ್ದು, ಒಂದು ಕಾಲು ಪುಡಿಪುಡಿಯಾಗಿದೆ . ನಿಕಮ್ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಾರಿ ರೈಲ್ವೆ ಪೊಲೀಸ್ (GRP) ನ ಕಲ್ಯಾಣ್ ಘಟಕವು ತನಿಖೆಯನ್ನು ಪ್ರಾರಂಭಿಸಿದೆ ಮತ್ತು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದೆ. ಮೊಬೈಲ್ ಫೋನ್ ಕಳ್ಳತನವು ಮುಂಬೈನ ರೈಲ್ವೆ ಜಾಲದಲ್ಲಿ ಹೆಚ್ಚಾಗಿ ನಡೆಯುವ ಅಪರಾಧಗಳಲ್ಲಿ ಒಂದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read