HomeLatest NewsBIG NEWS: ಕೊನೆಗೂ ಮೌನ ಮೌರಿದ ರಚಿತಾ ರಾಮ್: ದೇವರೇ ಎದುರು ಬಂದರೂ ಕ್ಷಮೆ ಕೇಳಲ್ಲ...

BIG NEWS: ಕೊನೆಗೂ ಮೌನ ಮೌರಿದ ರಚಿತಾ ರಾಮ್: ದೇವರೇ ಎದುರು ಬಂದರೂ ಕ್ಷಮೆ ಕೇಳಲ್ಲ ಎಂದು ಸ್ಪಷ್ಟನೆ!

ಬೆಂಗಳೂರು: ನಟಿ ರಚಿತಾ ರಾಮ್ ಸಂಜು ವೆಡ್ಸ್ ಗೀತಾ-2 ಸೀನಿಮಾ ಪ್ರಚಾರಕ್ಕೆ ಬಂದಿಲ್ಲ ಎಂದು ಆರೋಪಿಸಿ ನಿರ್ದೇಶ ನಾಗಶೇಖರ್ ಹಾಗೂ ಚಿತ್ರತಂಡ ರಚಿತಾ ರಾಮ್ ವಿರುದ್ಧ ಫಿಲ್ಮ್ ಚೇಂಬರ್ ಗೆ ದೂರು ನೀಡಿತ್ತು. ಈವರೆಗೆ ಮೌನವಾಗಿದ್ದ ರಚಿತಾ ರಾಮ್ ಕೊನೆಗೂ ಮೌನ ಮುರಿದಿದ್ದು, ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಈ ಮೊದಲು ಸಂಜು ವೆಡ್ಸ್ ಗೋತಾ-2 ಶೋಟಿಂಗ್ ವೇಳೆ ಮತ್ತೊಂದು ಚಿತ್ರದ ಪ್ರಚಾರ ಮಾಡಲು ನಿರ್ದೇಶಕ ನಾಗಶೇಖರ್ ಅವಕಾಶ ನೀಡಿರಲಿಲ್ಲ. ಈಗ ತಾವು ಬೇರೆ ಚಿತ್ರಗಳ ಕೆಲ್ಸದಲ್ಲಿ ಬ್ಯುಸಿ ಇರುವುದಾಗಿ ತಿಳಿಸಿದ್ದಾರೆ. ಹೀಗಾಗಿ ಈ ಚಿತ್ರ ಪ್ರಚಾರಕ್ಕೆ ಬರಲು ಸಾಧ್ಯವಾಗಿಲ್ಲ. ಅವರು ಮಾಡಿದ್ದನ್ನೇ ನಾನು ಮಾಡಿದ್ದೇನೆ ಎಂದು ರಚಿತಾ ರಾಮ್ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಸೋಷಿಯಲ್ ಮೀಡಿಯಾಗಳಲ್ಲಿ ತಾವು ಸಂಜು ವೆಡ್ಸ್ ಗೀತಾ ಪ್ರಚಾರವನ್ನು ನಿರಂತರವಾಗಿ ಮಾಡುತ್ತಿದ್ದೇನೆ. ಹಾಗಾಗಿ ತಾನು ತಪ್ಪು ಮಾಡಿದ್ದೇನೆ ಎಂದೆನಿಸಿಲ್ಲ. ನಾನು ತಪ್ಪು ಮಾಡಿದ್ದೇನೆ ಎನಿಸಿದರೆ ಚಿಕ್ಕಮಕ್ಕಳ ಕಾಲಿಗೆ ಬೇಕಾದರೂ ಬೀಳುತ್ತೇನೆ, ತಪ್ಪು ಮಾಡಿಲ್ಲ ಎಂದರೆ ದೇವರೇ ಎದುರು ಬಂದರೂ ಕ್ಷಮೆ ಕೇಳಲ್ಲ. ನನ್ನಿಂದ ನನ್ನ ಅಭಿಮಾನಿಗಳಿಗೆ ಬೇಸರವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular