Caught on Cam | ಮದ್ಯ ಕದ್ದು ಓಡಿ ಹೋಗಲು ಯತ್ನ; ಕೊನೇ ಕ್ಷಣದಲ್ಲಿ ಕಳ್ಳನಿಗೆ ಸ್ವಯಂಚಾಲಿತ ‘ಲಾಕ್’ ಶಾಕ್

ಮದ್ಯದ ಅಂಗಡಿಯಲ್ಲಿ ಕಳ್ಳತನಕ್ಕಿಳಿದವನು ಮುಜುಗರಕ್ಕೊಳಗಾದ ಘಟನೆ ಆಸ್ಟ್ರೇಲಿಯಾದ ಪರ್ತ್‌ನಲ್ಲಿ ನಡೆದಿದೆ. ಮದ್ಯದ ಅಂಗಡಿಯೊಂದರ ಸಿಸಿ ಕ್ಯಾಮೆರಾದಲ್ಲಿ ಕಳ್ಳನ ಕೃತ್ಯ ಸೆರೆಯಾಗಿದೆ. ಕಳ್ಳ ಅಂಗಡಿಯಲ್ಲಿ ಹುಡುಕಾಡುತ್ತಾ ಮದ್ಯದ ಸ್ಟಾಕ್ ಅನ್ನು ಎತ್ತಿಕೊಂಡು ಕೌಂಟರ್ ಕಡೆಗೆ ಹೋಗುತ್ತಾನೆ. ಆದರೆ ಅಲ್ಲಿ ಆತ ಬಿಲ್ ಪಾವತಿ ಮಾಡುವ ಬದಲಾಗಿ ಮದ್ಯದ ಸ್ಟಾಕ್ ನೊಂದಿಗೆ ಓಡಿಹೋಗಲು ಯತ್ನಿಸುತ್ತಾನೆ. ಆದರೆ ಬಾಗಿಲು ಸ್ವಯಂಚಾಲಿತವಾಗಿ ಲಾಕ್ ಆಗಿದ್ದರಿಂದ ಆತ ಓಡಿಹೋಗುವ ಯತ್ನದಲ್ಲಿ ವಿಫಲನಾಗುತ್ತಾನೆ.

ಬಳಿಕ ತಾನು ಇಲ್ಲಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅರಿತು ಬಾಟಲಿಗಳನ್ನು ಕೌಂಟರ್‌ನಲ್ಲಿ ಇರಿಸುತ್ತಾನೆ. ಕ್ಯಾಷಿಯರ್ ಬಾಗಿಲು ತೆರೆಯುತ್ತಿದ್ದಂತೆ ಅಂಗಡಿಯಿಂದ ಹೊರಹೋಗುತ್ತಾನೆ. ಈ ವ್ಯಕ್ತಿಯ ಬಗ್ಗೆ ತಿಳಿದಿದೆಯೇ ಎಂದು ಕಳ್ಳನ ಕೃತ್ಯದ ಸಿಸಿ ಕ್ಯಾಮೆರಾ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಪೊಲೀಸರಿಗೆ ಮಾಹಿತಿ ನೀಡುವಂತೆ ಫೋನ್ ನಂಬರ್ ನೀಡಲಾಗಿದೆ. ಅಂದಿನಿಂದ ಈ ವಿಡಿಯೋ ವೈರಲ್ ಆಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read