HomeCrimeShocking: ಮಗನಿಗೆ ಡ್ರಗ್ಸ್ ನೀಡಿ ಕಳ್ಳತನಕ್ಕೆ ಕಳುಹಿಸುತ್ತಿದ್ದ ತಾಯಿ....!

Shocking: ಮಗನಿಗೆ ಡ್ರಗ್ಸ್ ನೀಡಿ ಕಳ್ಳತನಕ್ಕೆ ಕಳುಹಿಸುತ್ತಿದ್ದ ತಾಯಿ….!

ಮಹಾರಾಷ್ಟ್ರದ ಮುಂಬೈನಲ್ಲೊಂದು ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ. ಮಗನಿಗೆ ಕಳ್ಳತನ ಮಾಡಲು ಪ್ರೋತ್ಸಾಹಿಸುತ್ತಿದ್ದ ತಾಯಿಯೊಬ್ಬಳು ಆತ ಕೃತ್ಯಕ್ಕೆ ತೆರಳುವ ಮುನ್ನ ಡ್ರಗ್ಸ್ ನೀಡುತ್ತಿದ್ದಳು ಎಂಬ ಸಂಗತಿ ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.

24 ವರ್ಷದ ಕೃಷ್ಣ ರವಿ ಮಹೇಸ್ಕರ್ ಬಂಧಿತ ಆರೋಪಿಯಾಗಿದ್ದು, ಮನೆಗಳ ಬೀಗ ಮುರಿದು ಕಳವು ನಡೆಸುತ್ತಿದ್ದ ಈತ ಕೃತ್ಯ ನಡೆಸಲು ತೆರಳುವ ಮುನ್ನ ಆತನ ತಾಯಿ 50 ವರ್ಷದ ವಿಜೇತಾ ಮಹೇಸ್ಕರ್ ಡ್ರಗ್ಸ್ ನೀಡಿ ಕಳುಹಿಸುತ್ತಿದ್ದಳು ಎನ್ನಲಾಗಿದೆ.

ಅಲ್ಲದೆ ಆತ ಕಳುವು ಮಾಡಿ ತಂದ ವಸ್ತುಗಳನ್ನು ಈಕೆಯೇ ಮಾರಾಟ ಮಾಡುತ್ತಿದ್ದಳು ಎಂದು ಕಾಲಾಚೌಕಿ ಠಾಣೆ ಪೊಲೀಸರು ತಿಳಿಸಿದ್ದಾರೆ. ಕೃಷ್ಣ ರವಿ ವಿರುದ್ಧ ವಿವಿಧ ಠಾಣೆಗಳಲ್ಲಿ 22 ಪ್ರಕರಣಗಳಿದ್ದು, ತಲೆಮರೆಸಿಕೊಂಡಿರುವ ಆತನ ತಾಯಿ ವಿಜೇತಾ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular