HomeLatest Newsಹಲ್ಲಿ ಓಡಿಸೋಕೆ ಬೆಸ್ಟ್ ಈ ಸಿಂಪಲ್ ಟಿಪ್ಸ್

ಹಲ್ಲಿ ಓಡಿಸೋಕೆ ಬೆಸ್ಟ್ ಈ ಸಿಂಪಲ್ ಟಿಪ್ಸ್

ಮನೆಯ ಗೋಡೆಯ ಮೇಲೆ ಸರಿಸೃಪ ಹಲ್ಲಿ ಕಾಣೋದು ಮಾಮೂಲಿ. ಅನೇಕರಿಗೆ ಹಲ್ಲಿಯೆಂದ್ರೆ ಭಯ. ಹಲ್ಲಿ ಕಾಣ್ತಿದ್ದಂತೆ ಚೀರಿಕೊಳ್ತಾರೆ. ನೀವೂ ಅವರಲ್ಲಿ ಒಬ್ಬರಾಗಿದ್ದು, ಹಲ್ಲಿಯನ್ನು ಓಡಿಸೋದು ಹೇಗೆ ಎಂಬ ಚಿಂತೆಯಲ್ಲಿದ್ದರೆ ಈ ಟಿಪ್ಸ್ ನಿಮಗೆ ಉಪಯುಕ್ತವಾಗಲಿದೆ.

ನವಿಲುಗರಿ, ಮೊಟ್ಟೆ ಸಿಪ್ಪೆ ಹಲ್ಲಿ ಹತ್ತಿರವೂ ಸುಳಿಯೋದಿಲ್ಲ ಎಂದು ಅನೇಕರು ಸಲಹೆ ನೀಡ್ತಾರೆ. ಕೆಲವೊಮ್ಮೆ ನವಿಲುಗರಿ ಪ್ರಯೋಜನಕ್ಕೆ ಬರೋದಿಲ್ಲ. ನವಿಲುಗರಿ ಮೇಲೆಯೇ ಹಲ್ಲಿ ಓಡಾಡೋದಿದೆ. ಹಾಗಾಗಿ ನವಿಲು‌ ಗರಿ ಸಂಗ್ರಹಿಸಿ ಮನೆಯಲ್ಲಿಡುವ ಸಾಹಸ ಬೇಡ. ಮನೆಯಲ್ಲಿರುವ ವಸ್ತುಗಳನ್ನು ಬಳಸಿ ಸುಲಭವಾಗಿ ಹಲ್ಲಿಯಿಂದ ಮುಕ್ತಿ ಪಡೆಯಬಹುದು.

ಕಾಳು ಮೆಣಸು ಮನೆಯಲ್ಲಿದ್ದರೆ ಹಲ್ಲಿ ಮನೆಯಿಂದ ಹೊರ ಹೋಯ್ತು ಎಂದೇ ಅರ್ಥ. ಕಾಳು ಮೆಣಸಿನ ಪುಡಿಯನ್ನು ನೀರಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತ್ರ ಇದನ್ನು ಸ್ಪ್ರೇ ಬಾಟಲಿಗೆ ಹಾಕಿ ಹಲ್ಲಿ ಇರುವ ಜಾಗಗಳಿಗೆ ಸ್ಪ್ರೇ ಮಾಡಿ. ಕಾಳುಮೆಣಸಿನ ವಾಸನೆಗೆ ಹಲ್ಲಿ ಮನೆ ಬಿಟ್ಟು ಓಡಿ ಹೋಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಂದು ಸ್ಪ್ರೇ ಬಾಟಲಿಗೆ ಈರುಳ್ಳಿ ರಸ, ನೀರನ್ನು ಹಾಕಿ. ಅದಕ್ಕೆ ಎರಡು ಹನಿ ಬೆಳ್ಳುಳ್ಳಿ ರಸ ಹಾಕಿ. ಹಲ್ಲಿ ಹೆಚ್ಚಾಗಿ ಬರುವ ಜಾಗಗಳಿಗೆ ಸ್ಪ್ರೇ ಮಾಡಿ.

ಚಳಿಗಾಲದಲ್ಲಿ ಹಲ್ಲಿಗಳು ಹೆಚ್ಚಾಗಿ ಕಾಡೋದಿಲ್ಲ. ಹಲ್ಲಿಗೆ ತಣ್ಣನೆಯ ವಾತಾವರಣದಲ್ಲಿ ವಾಸ ಮಾಡೋದು ಕಷ್ಟ. ಹಲ್ಲಿ ಕಂಡ ತಕ್ಷಣ ಫ್ರಿಜ್ ನೀರು ಅಥವಾ ಐಸ್ ನೀರನ್ನು ಹಲ್ಲಿ ಮೈ ಮೇಲೆ ಸ್ಪ್ರೇ ಮಾಡಿ. ಪದೇ ಪದೇ ಹೀಗೆ ಮಾಡುತ್ತಿದ್ದರೆ ಹಲ್ಲಿ ನಿಮ್ಮ ಮನೆಗೆ ಬರೋದಿಲ್ಲ.

ಬಟ್ಟೆ ವಾಸನೆ ಬರದಿರಲಿ ಎಂಬ ಕಾರಣಕ್ಕೆ ಅನೇಕರು ಡಾಂಬರ್ ಗುಳಿಗೆ ಬಳಸ್ತಾರೆ. ಈ ಡಾಂಬರ್ ಗುಳಿಗೆ ಹಲ್ಲಿ ಓಡಿಸಲು ಸಹಕಾರಿ. ಹಲ್ಲಿ ಓಡಾಡುವ ಜಾಗದಲ್ಲಿ ಒಂದು ಗುಳಿಗೆ ಇಟ್ಟು ನೋಡಿ.

For Latest News Updates, Join Our Whatsapp Community🚩
RELATED ARTICLES

Most Popular