ಗರ್ಭಾವಸ್ಥೆಯಲ್ಲಿ ಕೆಲವು ವಿಷಯಗಳ ಬಗ್ಗೆ ಹೇಳುವ ಈ ಮಾತುಗಳು ನಿಜವಲ್ಲ

ಮಹಿಳೆಯರು ಗರ್ಭಾವಸ್ಥೆಯ ವೇಳೆ ಅವರು ತಮ್ಮ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕು. ಆದರೆ, ಕೆಲವರು ಗರ್ಭಾವಸ್ಥೆಯ ಬಗ್ಗೆ ಕೆಲವು ವಿಷಯಗಳನ್ನು ಹೇಳುತ್ತಾರೆ. ಆದರೆ ಅದು ಸತ್ಯವೇ? ಸುಳ್ಳೆ?ಎಂಬುದನ್ನು ತಿಳಿದುಕೊಳ್ಳಿ.

*ಗರ್ಭಾವಸ್ಥೆಯಲ್ಲಿ ಕೂದಲಿಗೆ ಬಣ್ಣ ಹಚ್ಚುವುದರಿಂದ ಅದರಲ್ಲಿರುವ ಜೀವಾಣುಗಳು ಭ್ರೂಣದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳುತ್ತಾರೆ. ಆದರೆ ಅದು ಸುಳ್ಳು. ಯಾಕೆಂದರೆ ಕೂದಲಿನ ಬಣ್ಣದಲ್ಲಿರುವ ಜೀವಾಣುಗಳು ತುಂಬಾ ಪರಿಣಾಮಕಾರಿಯಾಗಿರುವುದಿಲ್ಲವಂತೆ. ಆದ್ದರಿಂದ ಗರ್ಭಾವಸ್ಥೆಯಲ್ಲಿ ಕೂದಲಿಗೆ ಬಣ್ಣ ಹಚ್ಚಬಹುದು.

*ಗರ್ಭಿಣಿರಿಗೆ ಮಗು ಮತ್ತು ತಾಯಿಯ ಇಬ್ಬರಿರುವುದರಿಂದ ಆಹಾರಗಳನ್ನು ಇಬ್ಬರಿಗೆ ಸರಿ ಹೊಂದುವಂತೆ ತಿನ್ನಬೇಕೆಂದು ಹೇಳುತ್ತಾರೆ. ಆದರೆ ಅದು ನಿಜವಲ್ಲ. ನಿಮಗೆ ಎಷ್ಟು ಬೇಕು ಅಷ್ಟು ಮಾತ್ರ ಸೇವಿಸಿ. ಅತಿಯಾಗಿ ಸೇವಿಸಿದರೆ ಜಿರ್ಣಕ್ರಿಯೆಯಲ್ಲಿ ತೊಂದರೆಯಾಗಬಹುದು.

*ಗರ್ಭಿಣಿಯರು ದೈಹಿಕ ವ್ಯಾಯಾಮಗಳಿಂದ ದೂರವಿರಬೇಕು ಎಂದು ಹೇಳುತ್ತಾರೆ. ಆದರೆ ಇದು ನಿಜವಲ್ಲ. ತಜ್ಞರ ಪ್ರಕಾರ ಯೋಗ, ವ್ಯಾಯಾಮ, ಹಿಗ್ಗಿಸುವಿಕೆ ಮುಂತಾದ ದೈಹಿಕ ಸಾಮರ್ಥ್ಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಬೊಜ್ಜು, ನಿಯಂತ್ರಣದಲ್ಲಿಡಬಹುದು. ಮಗುವಿನ ಬುದ್ಧಿ ತೀಕ್ಷ್ಣವಾಗಿರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read