ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಪ್ಯಾಕ್ ಮಾಡಿದ ಆಹಾರ ಪದಾರ್ಥಗಳನ್ನು ಸೇವಿಸುತ್ತಾರೆ. ಇದು ನಮ್ಮ ಕೆಲಸವನ್ನು ಸುಲಭಗೊಳಿಸಿದರೆ ಇನ್ನೊಂದು ಕಡೆ ನಮ್ಮ ಆರೋಗ್ಯವನ್ನು ಹಾಳು ಮಾಡುತ್ತವೆ.
ಆದರೆ ಎಲ್ಲಾ ಪ್ಯಾಕ್ ಮಾಡಿದ ಆಹಾರ ಪದಾರ್ಥಗಳು ಆರೋಗ್ಯವನ್ನು ಹಾಳು ಮಾಡುವುದಿಲ್ಲ. ಅಂತಹ ಆಹಾರಗಳು ಯಾವುದೆಂಬುದನ್ನು ಅರಿತು ಸೇವಿಸದರೆ ಆರೋಗ್ಯ ಚೆನ್ನಾಗಿರುತ್ತದೆ.
ಫ್ರೀಜ್ ಮಾಡಿದ ಸಮುದ್ರದ ಆಹಾರ, ಕೊಬ್ಬು ರಹಿತ ಹಾಲು, ಹಿಟ್ಟುಗಳಿಂದ ತಯಾರಿಸಿದ ಬ್ರೆಡ್, ಒಣ ಹಣ್ಣುಗಳು ಮತ್ತು ಓಟ್ ಮೀಲ್, ಸಕ್ಕರೆ, ಸಿರಪ್ ಮತ್ತು ಸಾಸ್, ಫ್ರಿಜ್ ನಲ್ಲಿಟ್ಟ ಹಣ್ಣುಗಳು ಮತ್ತು ತರಕಾರಿಗಳು. ಇವುಗಳು ದೇಹಕ್ಕೆ ಪೋಷಕಾಂಶಗಳನ್ನು ಒದಗಿಸುತ್ತವೆ.
[adrotate banner=”27″]
ಆದರೆ ಪ್ಯಾಕ್ ಮಾಡಿದ ಕೇಕ್, ಕುಕ್ಕೀಸ್, ಚಿಪ್ಸ್, ಕ್ಯಾಂಡಿ, ಕೆನಡಿ ಆಹಾರ, ರೆಡಿ ಟೂ ಈಟ್(ready to eat), ಹೆಚ್ಚು ಉಪ್ಪಿರುವ ಆಹಾರ ಇವುಗಳನ್ನು ಸೇವಿಸಿದರೆ ಆರೋಗ್ಯ ಹಾಳಾಗುವುದು ಖಚಿತ.