ಅಂಡರ್ ಆರ್ಮ್ಸ್ ಕಪ್ಪಗಾಗಲು ನೀವು ಮಾಡುವ ಈ ತಪ್ಪುಗಳೇ ಕಾರಣ

ಬೆವರು, ಬ್ಯಾಕ್ಟೀರಿಯಾಗಳ ಕಾರಣದಿಂದ ಅಂಡರ್ ಆರ್ಮ್ಸ್ ಕಪ್ಪಾಗುತ್ತದೆ. ಅದರಿಂದ ಸ್ಲಿವ್ ಲೆಸ್ ಡ್ರೆಸ್ ಗಳನ್ನು ಧರಿಸಲು ಸಾಧ್ಯವಾಗುವುದಿಲ್ಲ. ಈ ಅಂಡರ್ ಆರ್ಮ್ಸ್ ಕಪ್ಪಾಗಲು ನೀವು ಮಾಡುವಂತಹ ತಪ್ಪುಗಳೇ ಕಾರಣ. ಹಾಗಾಗಿ ಅದು ಏನೆಂದು ತಿಳಿದು ಸರಿಪಡಿಸಿಕೊಳ್ಳಿ

*ಅಂಡರ್ ಆರ್ಮ್ಸ್ ಚರ್ಮವು ತುಂಬಾ ಸೂಕ್ಷ್ಮವಾಗಿರುತ್ತದೆ. ಇಲ್ಲಿನ ಕೂದಲನ್ನು ತೆಗೆಯಲು ಯಾವಾಗಲೂ ರೇಜರ್ ನ್ನು ಬಳಸುವುದರಿಂದ ಈ ಭಾಗ ಕಪ್ಪಾಗುತ್ತದೆ.

*ಕೆಲಸ ಮಾಡಿದಾಗ ಅಂಡರ್ ಆರ್ಮ್ಸ್ ನಲ್ಲಿ ಹೆಚ್ಚು ಬೆವರು ಬರುತ್ತದೆ. ಅದನ್ನು ಕೂಡಲೇ ಸ್ವಚ್ಚಗೊಳಿಸಬೇಕು. ಇಲ್ಲವಾದರೆ ಧೂಳು, ಕೊಳೆ ತೆರೆದ ರಂಧ್ರಗಳಿಗೆ ಪ್ರವೇಶಿಸಿ ಆ ಭಾಗ ಕಪ್ಪಾಗುತ್ತದೆ.

*ಸ್ನಾನ ಮಾಡುವಾಗ ಹಾರ್ಡ್ ಸೋಪುಗಳನ್ನು ಬಳಸುವುದರಿಂದ ಚರ್ಮದ ತೇವಾಂಶ ಕಡಿಮೆಯಾಗಿ ಚರ್ಮ ಒಣಗಿ ಕಪ್ಪಾಗುತ್ತದೆ.

*ಬೆವರಿನ ವಾಸನೆ ನಿವಾರಿಸಲು ಕಳಪೆ, ರಾಸಾಯನಿಕಯುಕ್ತ ಡಿಯೋಗಳನ್ನು ಹೆಚ್ಚಾಗಿ ಬಳಸುವುದರಿಂದ ಅಂಡರ್ ಆರ್ಮ್ಸ್ ಕಪ್ಪಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read