ʼಹೃದಯಾಘಾತʼಕ್ಕೆ ಕಾರಣವಾಗಬಹುದು ಈ 4 ಆಹಾರ ಪದಾರ್ಥಗಳು

ಕಳಪೆ ಆಹಾರ ಪದ್ಧತಿಯಿಂದ ಹೃದಯಾಘಾತದ ಅಪಾಯ ಹೆಚ್ಚಾಗುತ್ತದೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಹಾಗಾಗಿ ನಿಮ್ಮ ದೈನಂದಿನ ದಿನಚರಿ ಬಗ್ಗೆ ನೀವು ವಿಶೇಷ ಗಮನ ಕೊಡಬೇಕು. ಹೃದಯ ರೋಗಿಗಳಿಗೆ ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಹೆಚ್ಚಳ, ತ್ವರಿತ ಮತ್ತು ನಿಧಾನ ಹೃದಯ ಬಡಿತ ಹೀಗೆ ಸಾಕಷ್ಟು ಸಮಸ್ಯೆಗಳು ಕಂಡುಬರುತ್ತವೆ. ಇವನ್ನೆಲ್ಲ ನಿರ್ಲಕ್ಷಿಸುವಂತಿಲ್ಲ.

ಹೃದಯಾಘಾತಕ್ಕೆ ಕಾರಣವಾಗಬಲ್ಲ ಕೆಲವೊಂದು ಆಹಾರ ಪದಾರ್ಥಗಳನ್ನು ಕೂಡ ನೀವು ತ್ಯಜಿಸಬೇಕು. ಅವು ಯಾವುವು ಅನ್ನೋದನ್ನು ನೋಡೋಣ. ನೀವು ಹೆಚ್ಚು ಉಪ್ಪು ಬಳಸ್ತಾ ಇದ್ರೆ ಈ ಅಭ್ಯಾಸವನ್ನು ಬದಲಿಸಿಕೊಳ್ಳಿ. ಅತಿಯಾದ ಉಪ್ಪು ಸೇವನೆ ನಿಮ್ಮ ಹೃದಯಕ್ಕೆ ಒಳ್ಳೆಯದಲ್ಲ. ಉಪ್ಪನ್ನು ಅತಿಯಾಗಿ ಸೇವಿಸಿದ್ರೆ ರಕ್ತದೊತ್ತಡ ಹೆಚ್ಚಾಗುತ್ತದೆ.

ಅತಿಯಾದ ಸಕ್ಕರೆ ಸೇವನೆ ಕೂಡ ಹೃದಯಕ್ಕೆ ಅಪಾಯಕಾರಿ. ಹೆಚ್ಚು ಸಕ್ಕರೆ ತಿನ್ನುವುದರಿಂದ ದೇಹವು ಇನ್ಸುಲಿನ್ ಬಳಸಲು ಸಾಧ್ಯವಾಗುವುದಿಲ್ಲ. ಮಧುಮೇಹದ ಅಪಾಯವೂ ಎದುರಾಗುವ ಸಾಧ್ಯತೆ ಇರುತ್ತದೆ.

ನಿಮ್ಮ ಆಹಾರದಲ್ಲಿ ಮೊಟ್ಟೆಯ ಹಳದಿ ಭಾಗವನ್ನು ಸೇರಿಸಬೇಡಿ. ಈ ಹಳದಿ ಭಾಗದಲ್ಲಿ ಸ್ಯಾಚುರೇಟೆಡ್ ಕೊಬ್ಬು ಇರುತ್ತದೆ. ಹಾಗಾಗಿ ಇವುಗಳನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿ.

ಮೈದಾ ಯಾವುದೇ ಸಂದರ್ಭದಲ್ಲೂ ದೇಹಕ್ಕೆ ಒಳ್ಳೆಯದಲ್ಲ. ವಿಶೇಷವಾಗಿ ಹೃದ್ರೋಗಿಗಳಿಗೆ ಇದು ತುಂಬಾ ಅಪಾಯಕಾರಿ. ಇದರ ಸೇವನೆಯಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಹಾಗಾಗಿ ಈ ನಾಲ್ಕು ಆಹಾರ ಪದಾರ್ಥಗಳನ್ನು ದೂರವಿಟ್ಟರೆ ಹೃದಯಾಘಾತದ ಅಪಾಯವನ್ನು ತಪ್ಪಿಸಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read