HomeCrimeಮೂಳೆ ಜಾಸ್ತಿ ಇದೆ, ಮಾಂಸ ಹಾಕು ಎಂದು ಕೇಳಿದ್ದಕ್ಕೆ ಗ್ರಾಹಕನ ಮೇಲೆ ಹಲ್ಲೆ

ಮೂಳೆ ಜಾಸ್ತಿ ಇದೆ, ಮಾಂಸ ಹಾಕು ಎಂದು ಕೇಳಿದ್ದಕ್ಕೆ ಗ್ರಾಹಕನ ಮೇಲೆ ಹಲ್ಲೆ

ಶಿವಮೊಗ್ಗ: ಮಾಂಸದ ಅಂಗಡಿಯಲ್ಲಿ ಮೂಳೆಗಳನ್ನು ಹೆಚ್ಚಾಗಿ ಹಾಕಿದ್ದು, ಇದರ ಬದಲು ಮಟನ್ ಹೆಚ್ಚು ಹಾಕುವಂತೆ ಕೇಳಿದ್ದಕ್ಕೆ ಅನ್ಯ ಕೋಮಿನ ಅಪ್ರಾಪ್ತ ಯುವಕ ಗ್ರಾಹಕನ ಮೇಲೆ ಹಲ್ಲೆ ನಡೆಸಿದ್ದಾನೆ.

ಶಿವಮೊಗ್ಗದ ಟಿಪ್ಪು ನಗರದ ಮಟನ್ ಅಂಗಡಿಯಲ್ಲಿ ಸೋಮವಾರ ಬೆಳಗ್ಗೆ ಘಟನೆ ನಡೆದಿದೆ. ಗಾಡಿಕೊಪ್ಪ ನಿವಾಸಿ ಮಲ್ಲೇಶಪ್ಪ(40) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಟಿಪ್ಪು ನಗರದ ಮಟನ್ ಅಂಗಡಿಯಲ್ಲಿ ಮಲ್ಲೇಶಪ್ಪ ಮಟನ್ ಖರೀದಿಸಿದ್ದು, ಮೂಳೆಗಳನ್ನು ಹೆಚ್ಚಾಗಿ ಹಾಕಲಾಗಿತ್ತು. ಹೀಗಾಗಿ ಅಪ್ರಾಪ್ತನ ತಂದೆಯನ್ನು ಕರೆದು ತಿಳಿಸಿದ್ದಾರೆ. ಆಗ ಆಕ್ರೊಶಗೊಂಡ ಅಪ್ರಾಪ್ತ ಹರಿತವಾದ ವಸ್ತುವಿನಿಂದ ಮಲ್ಲೇಶಪ್ಪ ಮೇಲೆ ಹಲ್ಲೆ ಮಾಡಿದ್ದಾನೆ. ತುಂಗಾ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular