ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಮತಯಾಚನೆ ವೇಳೆ ಭದ್ರತಾ ವೈಫಲ್ಯ ನಡೆದಿದ್ದು, ಗನ್ ಇಟ್ಟುಕೊಂಡಿದ್ದ ವ್ಯಕ್ತಿ ರಿಯಾಜ್ ಎಂಬುವವರು ಮುಖ್ಯಮಂತ್ರಿಗೆ ಹಾರ ಹಾಕಿದ್ದಾರೆ ಪ್ರಕರಣ ಸಂಬಂಧ ರಿಯಾಜ್ ನನ್ನು ವಶಕ್ಕೆ ಪಡೆದ ಪೊಲೀಸರು ಹೇಳಿಕೆ ದಾಖಲಿಸಿದ್ದಾರೆ.
ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಭದ್ರತಾ ವೈಫಲ ಆಗಿಲ್ಲ, ಅವರವರ ರಕ್ಷಣೆಗೆ ಗನ್ ಇಟ್ಕೊಂಡಿರುತ್ತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಜೊತೆನೂ ಗನ್ ಮ್ಯಾನ್ ಗಳು ಇದ್ದಾರೆ. ಸೆಕ್ಯೂರಿಟಿ ವೈಫಲ್ಯ ಆಗಿಲ್ಲ, ವಿರೋಧ ಪಕ್ಷಗಳಿಗೆ ಮಾತನಾಡೋಕೆ ಒಂದು ವಿಷಯ ಬೇಕು ಎಂದಿದ್ದಾರೆ.
ಬೆಂಗಳೂರಿನ ಭೈರಸಂದ್ರದಲ್ಲಿ ನಿನ್ನೆ ನಡೆದ ಪ್ರಚಾರದ ವೇಳೆ ಘಟನೆ ನಡೆದಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಪರ ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರಚಾರ ನಡೆಸುವ ವೇಳೆ ಸೊಂಟದಲ್ಲಿ ಗನ್ ಇಟ್ಟುಕೊಂಡ ವ್ಯಕ್ತಿಯೊಬ್ಬ ( ರಿಯಾಜ್) ವಾಹನ ಏರಿ ಹಾರ ಹಾಕಿದ್ದಾನೆ.

