HomeLatest Newsಅವಲಕ್ಕಿ ಸೇವನೆಯಿಂದ ಇದೆ ಹಲವು ಆರೋಗ್ಯ ಭಾಗ್ಯ

ಅವಲಕ್ಕಿ ಸೇವನೆಯಿಂದ ಇದೆ ಹಲವು ಆರೋಗ್ಯ ಭಾಗ್ಯ

ಅಕ್ಕಿಯಿಂದಲೇ ತಯಾರಾಗುವ ಅವಲಕ್ಕಿಗೆ ದೇವರ ಪೂಜೆಯ ಸಂದರ್ಭದಲ್ಲಿ ವಿಶೇಷವಾದ ಸ್ಥಾನಮಾನವಿದೆ. ಕೃಷ್ಣನಿಗೂ, ಗಣಪನಿಗೂ ಪ್ರಿಯವಾದ ಅವಲಕ್ಕಿಯ ಪಂಚಕಜ್ಜಾಯವಿಲ್ಲದೆ ಹಲವು ಪೂಜೆಗಳು ಪೂರ್ಣಗೊಳ್ಳುವುದೇ ಇಲ್ಲ. ಇದರ ಸೇವನೆಯಿಂದ ಹಲವು ಆರೋಗ್ಯ ಭಾಗ್ಯಗಳನ್ನು ಪಡೆದುಕೊಳ್ಳಬಹುದು.

ಇದೊಂದು ಕಡಿಮೆ ಕ್ಯಾಲೊರಿ ಹೊಂದಿರುವ ಆಹಾರವಾಗಿದ್ದು ಸ್ವಲ್ಪ ತಿಂದೂ ಹೊಟ್ಟೆ ತುಂಬಿಸಿಕೊಳ್ಳಬಹುದು. ಇನ್ನು ನಿಮ್ಮ ತಿಂಗಳ ರಜೆ ಅನಾವಶ್ಯಕವಾಗಿ ಮುಂದೆ ಹೋಗುತ್ತಿದ್ದರೆ ಅವಲಕ್ಕಿ ತಿಂದು ನೋಡಿ. ಸರಿಯಾದ ಸಮಯಕ್ಕೆ ಪೀರಿಯಡ್ಸ್ ಆಗುತ್ತದೆ.

ಬೆಳ್ತಿಗೆ ಅನ್ನಕ್ಕಿಂತಲೂ ಇದು ಒಳ್ಳೆಯದಾಗಿದ್ದು ಇದರಲ್ಲಿ ಕಾರ್ಬೋಹೈಡ್ರೇಡ್ ಹೆಚ್ಚಿದ್ದು ಫ್ಯಾಟ್ ಪ್ರಮಾಣ ಕಡಿಮೆ ಇದೆ. ಹಾಗಾಗಿ ತೂಕ ಇಳಿಸಿಕೊಳ್ಳುವವರಿಗೆ ಇದು ಹೇಳಿ ಮಾಡಿಸಿದ ಆಹಾರ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಕ್ತ ಹೀನತೆ ಸಮಸ್ಯೆ ಇರುವವರು ಮತ್ತು ಗರ್ಭಿಣಿಯರು ಇದನ್ನು ಸೇವಿಸುವುದು ಬಹಳ ಒಳ್ಳೆಯದು. ಮಲಬದ್ಧತೆ ಸಮಸ್ಯೆ ಇರುವವರು ಮೊಸರವಲಕ್ಕಿ ಮಾಡಿ ಸೇವಿಸುವುದರಿಂದ ಜೀರ್ಣ ಕ್ರಿಯೆ ಸರಾಗವಾಗಿ ನಡೆಯುತ್ತದೆ. ಮಧುಮೇಹಿಗಳು ಅಕ್ಕಿಯ ಬದಲು ಅವಲಕ್ಕಿ ಸೇವಿಸುವುದು ಬಹಳ ಒಳ್ಳೆಯದು. ರಕ್ತದ ಸಕ್ಕರೆ ಅಂಶವನ್ನು ಇದು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular