HomeEntertainment'ಸೋಮು ಸೌಂಡ್ ಇಂಜಿನಿಯರ್' ಚಿತ್ರದ ವಿಡಿಯೋ ಹಾಡು ರಿಲೀಸ್

‘ಸೋಮು ಸೌಂಡ್ ಇಂಜಿನಿಯರ್’ ಚಿತ್ರದ ವಿಡಿಯೋ ಹಾಡು ರಿಲೀಸ್

ಶ್ರೇಷ್ಠ ಅಭಿನಯದ ಅಭಿ ನಿರ್ದೇಶನದ ‘ಸೋಮು ಸೌಂಡ್ ಇಂಜಿನಿಯರ್’ ಚಿತ್ರದ ”ಛಂದಸ್ಸಿನ ಚಂದದಲ್ಲಿ” ಎಂಬ ವಿಡಿಯೋ ಹಾಡನ್ನು  ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ.

ಈ ಹಾಡು ಕೆಲವೇ ಗಂಟೆಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವ ಮೂಲಕ ಗಾನಪ್ರಿಯರ ಗಮನ ಸೆಳೆದಿದೆ. ಸಿದ್ದಾರ್ಥ ಬೆಲ್ಮಣ್ಣು ಮತ್ತು ಮೇಘನಾ ಭಟ್ ಈ ಹಾಡಿಗೆ ಧ್ವನಿಯಾಗಿದ್ದು, ಚರಣ್ ರಾಜ್ ಸಂಗೀತ ಹಾಗೂ ಧನಂಜಯ್ ರಂಜನ್ ಸಾಹಿತ್ಯವಿದೆ.

ಈ ಚಿತ್ರದಲ್ಲಿ ಶ್ರೇಷ್ಠ ಸೇರಿದಂತೆ ನಿವಿಷ್ಕ ಪಾಟೀಲ್, ಗಿರೀಶ್ ಜಟ್ಟಿ, ಜಹಂಗೀರ್, ಯಶ್ ಶೆಟ್ಟಿ, ಅಪೂರ್ವ, ಚಂದನ ಕೆ ಗೌಡ ತಾರಾ ಬಳಗದಲ್ಲಿದ್ದಾರೆ. ದೀಪು ಎಸ್ ಕುಮಾರ್ ಸಂಕಲನ, ಶಿವಸೇನಾ ಛಾಯಾಗ್ರಾಹಣ, ಮಾಸ್ತಿ ಮತ್ತು ಅಭಿ ಸಂಭಾಷಣೆ, ವಿನೋದ್ ಅವರ ಸಾಹಸ ನಿರ್ದೇಶನವಿದೆ. ಕ್ರಿಸ್ಟೋಫರ್ ಕಿಣಿ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular