HomeEntertainment'ರಾಜಯೋಗ' ಚಿತ್ರದ ವಿಡಿಯೋ ಹಾಡು ರಿಲೀಸ್

‘ರಾಜಯೋಗ’ ಚಿತ್ರದ ವಿಡಿಯೋ ಹಾಡು ರಿಲೀಸ್

ಸ್ಯಾಂಡಲ್ವುಡ್ ನಲ್ಲಿ ಹಾಸ್ಯ ಕಲಾವಿದನಾಗಿ ಮಿಂಚಿರುವ ಧರ್ಮಣ್ಣ ಕಡೂರು ನಾಯಕ ನಟನಾಗಿ ಅಭಿನಯಿಸುತ್ತಿರುವ ‘ರಾಜಯೋಗ’ ಚಿತ್ರದ ವಿಡಿಯೋ ಹಾಡು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ”ಅಣ್ಣ ಬಂದ್ರೆ” ಎಂಬ ಈ ಹಾಡಿಗೆ ರವಿ ಸೊರಗಾವಿ ಮತ್ತು ವೇದಾವತಿ ಧ್ವನಿಯಾಗಿದ್ದು, ಲಿಂಗರಾಜ ಉಚ್ಚಂಗಿದುರ್ಗ ಸಾಹಿತ್ಯ ಬರೆದಿದ್ದಾರೆ.

ಲಿಂಗರಾಜ ಉಚ್ಚಂಗಿದುರ್ಗ ನಿರ್ದೇಶನದ ಈ ಚಿತ್ರವನ್ನು ರಾಮರತ್ನ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಕುಮಾರ ಕಂಠೀರವ ನಿರ್ಮಾಣ ಮಾಡಿದ್ದು, ಧರ್ಮಣ್ಣ ಕಡೂರು ಮತ್ತು ನಿರೀಕ್ಷ ರಾವ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮುಂದಿನ ತಿಂಗಳು ಏಪ್ರಿಲ್ 5ಕ್ಕೆ ಈ ಸಿನಿಮಾ ರಾಜ್ಯಾದ್ಯಂತ ತೆರೆ ಮೇಲೆ ಬರಲಿದೆ.

For Latest News Updates, Join Our Whatsapp Community🚩
RELATED ARTICLES

Most Popular