HomeEntertainmentರಿಲೀಸ್ ಆಯ್ತು ‌ʼಜಡ್ಜ್‌ಮೆಂಟ್‌ʼ ಚಿತ್ರದ ವಿಡಿಯೋ ಹಾಡು

ರಿಲೀಸ್ ಆಯ್ತು ‌ʼಜಡ್ಜ್‌ಮೆಂಟ್‌ʼ ಚಿತ್ರದ ವಿಡಿಯೋ ಹಾಡು

ಗುರುರಾಜ ಕುಲಕರ್ಣಿ ನಿರ್ದೇಶನದ ಜಡ್ಜ್ಮೆಂಟ್ ಚಿತ್ರದ ವಿಡಿಯೋ ಹಾಡನ್ನು g9 ಕಮ್ಯುನಿಕೇಶನ್ ಮೀಡಿಯಾ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ.

ಈ ಹಾಡಿಗೆ ವ್ಯಾಸರಾಜ್ ಸೋಸಲೆ ಮತ್ತು ಕರಿಬಸವ ತಡಕಲ್  ಧ್ವನಿಯಾಗಿದ್ದು, ಅನುಪ್ ಸೀಳಿನ್ ಸಂಗೀತ ಸಂಯೋಜನೆ ನೀಡಿದ್ದಾರೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ.

ಈ ಚಿತ್ರವನ್ನು g9 ಕಮ್ಯುನಿಕೇಶನ್ ಮೀಡಿಯಾ & ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದು, ರವಿಚಂದ್ರನ್ ಸೇರಿದಂತೆ ದಿಗಂತ್, ಮೇಘನಾ ಗಾಂವ್ಕರ್,  ಧನ್ಯ ರಾಮ್ ಕುಮಾರ್, ರಂಗಾಯಣ ರಘು, ಪ್ರಕಾಶ್ ಬೆಳವಾಡಿ, ಲಕ್ಷ್ಮಿ ಗೋಪಾಲಸ್ವಾಮಿ, ಟಿಎಸ್ ನಾಗಾಭರಣ, ಸುಜಯ್ ಶಾಸ್ತ್ರಿ, ಕೃಷ್ಣ ಹೆಬ್ಬಾಳೆ, ರವಿಶಂಕರ್ ಗೌಡ, ರೂಪ ರಾಯಪ್ಪ ಮತ್ತು ರೇಖಾ ಕೂಡ್ಲಿಗಿ ತೆರೆ ಹಂಚಿಕೊಂಡಿದ್ದಾರೆ. ರವಿವರ್ಮ ಸಾಹಸ ನಿರ್ದೇಶನ, ರಮೇಶ್ ಸಂಭಾಷಣೆ, ರಾಮ್ ಕಿರಣ್ ನೃತ್ಯ ನಿರ್ದೇಶನ, ಕೆಂಪರಾಜು ಸಂಕಲನ, ಪಿ ಕೆ ಎಚ್‌ ದಾಸ್ ಛಾಯಾಗ್ರಹಣವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular