HomeEntertainment'ಜಲಂಧರ' ಚಿತ್ರದ ವಿಡಿಯೋ ಹಾಡು ರಿಲೀಸ್

‘ಜಲಂಧರ’ ಚಿತ್ರದ ವಿಡಿಯೋ ಹಾಡು ರಿಲೀಸ್

ವಿಷ್ಣು ವಿ ಪ್ರಸನ್ನ ನಿರ್ದೇಶನದ ಬಹು ನಿರೀಕ್ಷಿತ ‘ಜಲಂಧರ’ ಚಿತ್ರದ ವಿಡಿಯೋ ಹಾಡು ಇಂದು  ಜಾನ್ಕರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ‘ಸಂತೆಯ ದಾರಿಯಲಿ’ ಎಂಬ ಈ ಹಾಡಿಗೆ  ವಿಜಯ್ ಪ್ರಕಾಶ್ ಹಾಗೂ ಮಾಧುರಿ ಶೇಷಾದ್ರಿ ಧ್ವನಿಯಾಗಿದ್ದು, ಜತಿನ್ ದರ್ಶನ್ ಸಂಗೀತ ಸಂಯೋಜನೆ ನೀಡಿದ್ದಾರೆ.  ಇನ್ನುಳಿದಂತೆ ಸುಪ್ರೀತ್ ಶರ್ಮ ಅವರ ಸಾಹಿತ್ಯವಿದೆ.

ಈ ಚಿತ್ರವನ್ನು ಸ್ಟೆಪಪ್ ಪಿಕ್ಚರ್ಸ್ ಸಂಸ್ಥೆ ನಿರ್ಮಾಣ ಮಾಡಿದ್ದು, ಪ್ರಮೋದ್ ಶೆಟ್ಟಿ ಸೇರಿದಂತೆ ಲೋಕೇಶ್ ಗೌಡ, ಋಷಿಕಾ ರಾಜ್, ಅರೋಹಿತ ಗೌಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶೇಶ್ ರಾವ್ ನೃತ್ಯ ಸಂಯೋಜನೆ, ವೆಂಕಿ udv, ಮತ್ತು ಸತೀಶ್ ಅವರ ಸಂಕಲನ, ಸರಿನ್ ರವೀಂದ್ರನ್, ವಿದ್ಯಾಶಂಕರ್ ಪಿಎಸ್ ಛಾಯಾಗ್ರಹಣವಿದೆ.

 

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular