HomeEntertainment'ಸಲಾರ್' ಚಿತ್ರದ ವಿಡಿಯೋ ಹಾಡು ರಿಲೀಸ್

‘ಸಲಾರ್’ ಚಿತ್ರದ ವಿಡಿಯೋ ಹಾಡು ರಿಲೀಸ್

ವಿಶ್ವದೆಲ್ಲೆಡೆ ಭರ್ಜರಿ ಸೌಂಡ್ ಮಾಡುತ್ತಿರುವ ಡಾರ್ಲಿಂಗ್ ಪ್ರಭಾಸ್ ಅಭಿನಯದ ‘ಸಲಾರ್’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳಿಪಟ ಮಾಡುವ ಮೂಲಕ ಹೊಸ ದಾಖಲೆ ಬರೆಯಲು ಸಜ್ಜಾಗಿದೆ. ‘ಸಲಾರ್’ ಚಿತ್ರತಂಡ ‘ಗೆಳೆಯಾ’ ಎಂಬ ವಿಡಿಯೋ ಹಾಡನ್ನು ಇಂದು ಬಿಡುಗಡೆ ಮಾಡಿದೆ. ಸಚಿನ್ ಬಸ್ರೂರ್ ಈ ಹಾಡಿಗೆ ಧ್ವನಿಗೂಡಿಸಿದ್ದು, ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ ಮ್ಯೂಸಿಕ್ ಕಂಪೋಸ್ ಮಾಡುವ ಮೂಲಕ ಸಾಹಿತ್ಯ ಬರೆದಿದ್ದಾರೆ.

ಹೊಂಬಾಳೆ ಫಿಲಂ ಯೂಟ್ಯೂಬ್ ಚಾನೆಲ್ ನಲ್ಲಿ ಕನ್ನಡ ಸೇರಿದಂತೆ ತೆಲುಗು ತಮಿಳು ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಈ ಹಾಡನ್ನು ವೀಕ್ಷಿಸಬಹುದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಪ್ರಭಾಸ್ ಸೇರಿದಂತೆ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್ ಪ್ರಮುಖ ಪಾತ್ರದಲ್ಲಿದ್ದು, ಹೊಂಬಾಳೆ ಫಿಲಂ  ಬ್ಯಾನರ್ ನಡಿ ವಿಜಯ್ ಕಿರಗುಂದೂರು ನಿರ್ಮಾಣ ಮಾಡಿದ್ದಾರೆ. ಉಜ್ವಲ್ ಕುಲಕರ್ಣಿ ಸಂಕಲನವಿದ್ದು, ಭುವನ್ ಗೌಡ ಛಾಯಾಗ್ರಾಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular