HomeEntertainmentಮಿಲನಾ-ಪೃಥ್ವಿ ನಟನೆಯ ʻಫಾರ್ ರಿಜಿಸ್ಟ್ರೇಷನ್’ ಚಿತ್ರದ ಟ್ರೇಲರ್ ರಿಲೀಸ್ |Watch Trailer

ಮಿಲನಾ-ಪೃಥ್ವಿ ನಟನೆಯ ʻಫಾರ್ ರಿಜಿಸ್ಟ್ರೇಷನ್’ ಚಿತ್ರದ ಟ್ರೇಲರ್ ರಿಲೀಸ್ |Watch Trailer

ಬೆಂಗಳೂರು : ಸ್ಯಾಂಡಲ್ ವುಡ್ ನಲ್ಲಿ ಬಹಳ ಕುತೂಹಲ ಕೆರಳಿಸಿದ್ದ ಬಹು ನಿರೀಕ್ಷಿತ ʻಫಾರ್ ರಿಜಿಸ್ಟ್ರೇಷನ್’ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ.

ದಿಯಾ ಖ್ಯಾತಿಯ ಪ್ರಥ್ವಿ ಅಂಬಾರ್ ಹಾಗೂ ಮಿಲನ ನಾಗರಾಜ್ ನಟಿಸಿರುವ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ನಟ ಪೃಥ್ವಿ ಅಂಬಾರ್ ಮಾತನಾಡಿ, ಫಾರ್ ರಿಜಿಸ್ಟ್ರೇಷನ್ ಎರಡು ಸಹಪಾಠಿಗಳ ಪ್ರಯತ್ನ ಇದು. ಇಬ್ಬರು ನವೀನ್ ಅವರ ಕನಸಿನ ಕೂಸು ಇದು. ತುಂಬಾ ಹಾರ್ಡ್ ವರ್ಕ್ ಆಗಿದೆ ಎಂದರು.

ಸಂಬಂಧಗಳ ಮಹತ್ವದ ಬಗ್ಗೆ ತಿಳಿಸುವ ಸಿನಿಮಾ ಇದಾಗಿದ್ದು, ಚಿತ್ರದಲ್ಲಿ ರವಿಶಂಕರ್, ತಬಲಾ ನಾಣಿ. ಸುಧಾ ಬೆಳವಾಡಿ, ಬಾಬು ಹಿರಣಯ್ಯ, ರಮೇಶ್ ಭಟ್. ಉಮೇಶ್ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಸಂಗೀತ ಸಂಯೋಜನೆ ಆರ್.ಕೆ ಹರೀಶ್, ಅಭಿಲಾಷ್ ಕಲಾತಿ, ಅಭಿಷೇಕ್ ಜಿ.ಕಾಸರಗೋಡು ಛಾಯಾಗ್ರಹಣ, ಮನು ಶೇಡ್ಗರ್ ಸಂಕಲನ ಚಿತ್ರಕ್ಕಿದೆ. ಈ ಸಿನಿಮಾ ಫೆ.23 ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular