HomeEntertainmentರಿಲೀಸ್ ಆಯ್ತು 'ಕಂಗುವ' ಚಿತ್ರದ ಮತ್ತೊಂದು ಟ್ರೈಲರ್

ರಿಲೀಸ್ ಆಯ್ತು ‘ಕಂಗುವ’ ಚಿತ್ರದ ಮತ್ತೊಂದು ಟ್ರೈಲರ್

ಸೂರ್ಯ ಅಭಿನಯದ ‘ಕಂಗುವ’ ಚಿತ್ರ ಈಗಾಗಲೇ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ತೆರೆ ಮೇಲೆ ಬರಲು ಸಜ್ಜಾಗಿದೆ. ಬಿಡುಗಡೆ ದಿನಾಂಕ ಹತ್ತಿರವಿರುವ ಕಾರಣ ಚಿತ್ರತಂಡ ಒಂದರ ಮೇಲೊಂದು ಸಿಹಿ ಸುದ್ದಿಯನ್ನು ನೀಡುತ್ತಲೇ ಇದೆ. ‘ಕಂಗುವ’  ಚಿತ್ರದ ಮತ್ತೊಂದು ಟ್ರೈಲರ್ ನಿನ್ನೆ ಸರಿಗಮ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು, ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವುದಲ್ಲದೆ ನೋಡುಗರಿಂದ ಮೆಚ್ಚುಗೆ ಗಳಿಸಿದೆ.

ಶಿವ ನಿರ್ದೇಶನದ ಈ ಚಿತ್ರದಲ್ಲಿ ಸೂರ್ಯ ಸೇರಿದಂತೆ ಬಾಬಿ ಡಿಯೋಲ್, ದಿಶಾ ಪಟಾನಿ, ಆನಂದರಾಜ್, ಟಿಎಂ ಕಾರ್ತಿಕ್, ಜಿ. ಮಾರಿಮುತ್ತು, ದೀಪಾ ವೆಂಕಟ್, ಬಾಲ ಸರವಣನ್, ಪ್ರೇಮ್ ಕುಮಾರ್, ರಾಜ್ ಅಯ್ಯಪ್ಪ, ನಟರಾಜನ್ ಸುಬ್ರಮಣ್ಯಂ, ಯೋಗಿ ಬಾಬು, ಕೋವೈ ಸರಳಾ, ಬಣ್ಣ ಹಚ್ಚಿದ್ದು, ಯುವಿ ಕ್ರಿಯೇಷನ್ಸ್  ಹಾಗೂ ಸ್ಟುಡಿಯೋ ಗ್ರೀನ್ ಬ್ಯಾನರ್ ನಲ್ಲಿ ಕೆಇ ಜ್ಞಾನವೇಲ್ ರಾಜಾ, ವಿ. ವಂಶಿಕೃಷ್ಣ ರೆಡ್ಡಿ, ಹಾಗೂ ಪ್ರಮೋದ್ ಉಪ್ಪಲಪಾಟಿ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ,  ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಮಾಡಿದ್ದು, ವೆಟ್ರಿ ಪಳನಿಸಾಮಿ ಅವರ  ಛಾಯಾಗ್ರಹಣ, ನಿಶಾದ್ ಯೂಸುಫ್ ಸಂಕಲನವಿದೆ.

 

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular