HomeEntertainmentಇಂದು ಬಿಡುಗಡೆಯಾಗಲಿದೆ 'ರಂಗಸಮುದ್ರ' ಚಿತ್ರದ ಟೀಸರ್

ಇಂದು ಬಿಡುಗಡೆಯಾಗಲಿದೆ ‘ರಂಗಸಮುದ್ರ’ ಚಿತ್ರದ ಟೀಸರ್

ರಾಜಕುಮಾರ್ ಅಸ್ಕಿ ಆಕ್ಷನ್ ಕಟ್ ಹೇಳಿರುವ ‘ರಂಗಸಮುದ್ರ’ ಸಿನಿಮಾ ನಾಳೆ ರಾಜ್ಯಾದ್ಯಂತ ತೆರೆ ಮೇಲೆ ಬರಲಿದೆ. ರಂಗಸಮುದ್ರ ಚಿತ್ರತಂಡ ನಿನ್ನೆ ಟೀಸರ್ ಬಿಡುಗಡೆ ಮಾಡುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಇಂದು ಸಂಜೆ 6 ಗಂಟೆಗೆ ಝಂಕರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಟೀಸರ್ ರಿಲೀಸ್ ಆಗಲಿದೆ.

ಹೊಯ್ಸಳ ಕೊಣನೂರ್ ತಮ್ಮ ಹೊಯ್ಸಳ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ಈ ಸಿನಿಮಾ ನಿರ್ಮಾಣ ಮಾಡಿದ್ದು, ರಂಗಾಯಣ ರಘು, ಸಂಪತ್ ರಾಜ್, ಕಾರ್ತಿಕ್, ಉಗ್ರಂ ಮಂಜು, ಗುರುರಾಜ್ ಹೊಸಕೋಟೆ, ದಿವ್ಯ ಗೌಡ, ಸ್ಕಂದ, ಮಹೇಂದ್ರ ಅಭಿನಯಿಸಿದ್ದಾರೆ.ದೇಸಿ ಮೋಹನ್ ಸಂಗೀತ ಸಂಯೋಜನೆ ನೀಡಿದ್ದು, ಆರ್ ಗಿರಿ ಸಂಕಲನ, ಶ್ರೀಕಾಂತ್ ಛಾಯಾಗ್ರಹಣ, ಮತ್ತು ವಾಗೀಶ್ ಚನ್ನಗಿರಿ ಸಾಹಿತ್ಯವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular