HomeEntertainmentಚಾಲೆಂಜಿಂಗ್ ಸ್ಟಾರ್ ಹುಟ್ಟುಹಬ್ಬದಂದು ಟಿಕೆಟ್ ದರದಲ್ಲಿ ಶೇ.50 ಆಫರ್ ನೀಡಿದ 'ಜಸ್ಟ್ ಪಾಸ್' ಚಿತ್ರತಂಡ

ಚಾಲೆಂಜಿಂಗ್ ಸ್ಟಾರ್ ಹುಟ್ಟುಹಬ್ಬದಂದು ಟಿಕೆಟ್ ದರದಲ್ಲಿ ಶೇ.50 ಆಫರ್ ನೀಡಿದ ‘ಜಸ್ಟ್ ಪಾಸ್’ ಚಿತ್ರತಂಡ

ನಾಳೆ ಸ್ಯಾಂಡಲ್ವುಡ್ನ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬವಾಗಿದ್ದು, ಅವರ ಅಭಿಮಾನಿಗಳು ವಿವಿಧ ರೀತಿಯಲ್ಲಿ ಸೆಲೆಬ್ರೇಟ್ ಮಾಡಲು ಸಜ್ಜಾಗಿದ್ದಾರೆ.

ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ ‘ಜಸ್ಟ್ ಪಾಸ್’ ಸಿನಿಮಾ ರಾಜ್ಯದೆಲ್ಲೆ ಡೆ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಪ್ರೇಕ್ಷಕರ ಮನಮುಟ್ಟುವಲ್ಲಿ ಯಶಸ್ವಿಯಾಗಿದೆ. ಜಸ್ಟ್ ಪಾಸ್ ಚಿತ್ರತಂಡ ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ ವೀಕ್ಷಕರಿಗೆ ವಿಶೇಷ ಆಫರ್ ನೀಡಿದೆ. ಜಸ್ಟ್ ಪಾಸ್ ಟಿಕೆಟ್ ದರದಲ್ಲಿ ನಾಳೆ ಐವತ್ತು ಪರ್ಸೆಂಟ್ ರಿಯಾಯಿತಿ ಸಿಗಲಿದೆ.

ಬಿಡುಗಡೆಗೆ ಮುನ್ನ ಜಸ್ಟ್ ಪಾಸ್ ಚಿತ್ರದ ಹಾಡೊಂದನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡುವ ಮೂಲಕ ಚಿತ್ರ ತಂಡಕ್ಕೆ ಶುಭ ಹಾರೈಸಿದರು. ಜಸ್ಟ್ ವಾಸ್ ಚಿತ್ರತಂಡದ ಈ ನಡೆಗೆ ದರ್ಶನ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆ ಎಮ್ ರಾಘು ನಿರ್ದೇಶನದ ಈ ಸಿನಿಮಾವನ್ನು ರಾಯ್ ಎಂಟರ್ಟೈನ್ಮೆಂಟ್ ಬ್ಯಾನರ್ ನಡಿ ಕೆ ವಿ ಶಶಿಧರ್ ನಿರ್ಮಾಣ ಮಾಡಿದ್ದಾರೆ. ಶ್ರೀ ಪ್ರಣತಿ ಸಾಧು ಕೋಕಿಲ ರಂಗಾಯಣ ರಘು ಗೋವಿಂದೇಗೌಡ ದಾನಪ್ಪ ಸೇರಿದಂತೆ ಮೊದಲಾದ ಕಲಾವಿದರು ಕಲಾವಿದರು ತೆರೆ ಹಂಚಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular