ಮಧ್ಯಪ್ರದೇಶ : ದಿಂಬಿನ ಕೆಳಗೆ ಇಟ್ಟಿದ್ದ ಮೊಬೈಲ್ ಸ್ಪೋಟಗೊಂಡು ಬೆಡ್ ಗೆ ಬೆಂಕಿ ತಗುಲಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಅದೃಷ್ಟವಶಾತ್ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಧ್ಯಪ್ರದೇಶದ ಬರ್ವಾನಿ ಎಂಬಲ್ಲಿ ಈ ಘಟನೆ ನಡೆದಿದೆ. 35 ವರ್ಷದ ವಿನೋದ್ ಸೇಪ್ತಾ ತಮ್ಮ ಮೊಬೈಲ್ ನ್ನು ದಿಂಬಿನ ಕೆಳಗೆ ಇಟ್ಟು ಮಲಗಿದ್ದಾರೆ . ಆದರೆ ಅದು ಏಕಾಏಕಿ ಸ್ಪೋಟಗೊಂಡಿದೆ. ಅದೃಷ್ಟವಶಾತ್ ಅವರಿಗೆ ಯಾವುದೇ ಪ್ರಾಣಾಪಾಯ ಆಗಿಲ್ಲ, ಆದರೆ ಬೆಡ್ ಗೆ ಬೆಂಕಿ ತಗುಲಿ ಸುಟ್ಟು ಹೋಗಿದೆ. ಸಣ್ಣಪುಟ್ಟ ಗಾಯಗಳೊಂದಿಗೆ ಅವರು ಪಾರಾಗಿದ್ದಾರೆ.
ವಿನೋದ್ ಸೇಪ್ತಾ ಮೊಬೈಲ್ ಫೋನ್ ಸುಮಾರು 18,000 ರೂಪಾಯಿ ಮೌಲ್ಯದ್ದಾಗಿತ್ತು., ಮೊಬೈಲ್ ಫೋನ್ ಸುಮಾರು ಮೂರು ವರ್ಷ ಹಳೆಯದಾಗಿದ್ದು, ಅದು ಸ್ಪೋಟಗೊಂಡ ತಕ್ಷಣ ಕೋಣೆಯಲ್ಲಿದ್ದ ಬಕೆಟ್ನಿಂದ ನೀರನ್ನು ಸುರಿದರು. ದೇವರು ಅವನನ್ನು ಗಂಭೀರ ಹಾನಿಯಿಂದ ರಕ್ಷಿಸಿದನು ಎಂದು ವಿನೋದ್ ಅವರ ತಂದೆ ಭಗವಾನ್ ಅವರು ಹೇಳಿದರು. ವಿನೋದ್ ಎಡಭಾಗಕ್ಕೆ ಬದಲಾಗಿ ಬಲಭಾಗಕ್ಕೆ ಮಲಗಿದ್ದರೆ, ಅವರ ಮುಖಕ್ಕೆ ಗಂಭೀರ ಹಾನಿಯಾಗುತ್ತಿತ್ತು. ದೇವರ ದಯೆಯಿಂದ ಅವಘಡ ತಪ್ಪಿದೆ ಎಂದು ಹೇಳಿದ್ದಾರೆ.
ಶರ್ಟ್ ಅಥವಾ ಪ್ಯಾಟ್ ಜೇಬುಗಳಲ್ಲಿ, ದಿಂಬಿನ ಕೆಳಗೆ ಯಾವಾಗಲೂ ಮೊಬೈಲ್ ಇಟ್ಟುಕೊಳ್ಳುವುದು ತುಂಬಾ ಅಪಾಯ.ನೀವು ಹಿಂದಿನ ಅಥವಾ ಮುಂದಿನ ಜೇಬುಗಳಲ್ಲಿ ಮೊಬೈಲ್ ಇಟ್ಟುಕೊಳ್ಳುವುದು ತುಂಬಾ ಅಪಾಯಕಾರಿ. ಮೊಬೈಲ್ ಸದಾ ಇಂಟರ್ನೆಟ್ ಸಂಪರ್ಕ ಹೊಂದಿರುವ ಕಾರಣ ಅದು ಸಾಕಷ್ಟು ತರಂಗಗಳನ್ನು ಉಂಟು ಮಾಡುತ್ತಿರುತ್ತದೆ. ಇದು ನಿಮ್ಮ ದೇಹದ ವಿವಿಧ ಭಾಗಗಳಿಗೆ ಸಮಸ್ಯೆಯನ್ನು ಉಂಟು ಮಾಡುತ್ತದೆ. ಅಲ್ಲದೆ ಕ್ಯಾನ್ಸರ್ ಗೆ ಕಾರಣವಾಗುವ ಸಂಭವ ಹೆಚ್ಚಿದೆ.