HomeEntertainmentಸೆಪ್ಟಂಬರ್ 6 ಕ್ಕೆ ಬಿಡುಗಡೆಯಾಗಲಿದೆ 'ಪ್ರೇಮ ಕಾವ್ಯ' ಚಿತ್ರದ ಮೆಲೋಡಿ ಹಾಡು

ಸೆಪ್ಟಂಬರ್ 6 ಕ್ಕೆ ಬಿಡುಗಡೆಯಾಗಲಿದೆ ‘ಪ್ರೇಮ ಕಾವ್ಯ’ ಚಿತ್ರದ ಮೆಲೋಡಿ ಹಾಡು

ಈಗಾಗಲೇ ತನ್ನ ಟೈಟಲ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಶ್ರೀಧರ ಎನ್ ಎಸ್ ನಿರ್ದೇಶನದ ‘ಪ್ರೇಮ ಕಾವ್ಯ’ ಚಿತ್ರದ ”ನಿನ್ನ ಬಿಟ್ಟು” ಎಂಬ ಮೆಲೋಡಿ ಹಾಡು ಸೆಪ್ಟೆಂಬರ್ 6 ರಂದು  ಯುಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರ ತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಈ ಚಿತ್ರವನ್ನು ಸೂರಜ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಸೌರಬ್ ಕಿಶೋರ್ ನಿರ್ಮಾಣ ಮಾಡಿದ್ದು, ಮಧು ಬಾಬು ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ, ಅಜನೀಶ್ ಲೋಕನಾಥ್ ಮತ್ತು m.m ಮೋಹನ್ ಸಂಗೀತ ಸಂಯೋಜನೆ ನೀಡಿದ್ದಾರೆ. ಸೌರಭ್ ಕಿಶೋರ್ ಸೇರಿದಂತೆ ದಿವ್ಯಾ ಸುರೇಶ್, ರೂಪ ರಾಯಪ್ಪ, ಗಿರಿಧರ್ ಮಂಜುನಾಥ್ ಪ್ರಮುಖ ಪಾತ್ರದಲ್ಲಿದ್ದಾರೆ. ವೆಂಕಟ ಪ್ರಭು ಸಂಕಲನ, ಸುರೇಶ್ ಬಾಲ ಛಾಯಾಗ್ರಹಣ, ಶಿವ ಝಾನ್ಸಿಯವರ ಸಾಹಿತ್ಯವಿದೆ.

For Latest News Updates, Join Our Whatsapp Community🚩
RELATED ARTICLES

Most Popular