HomeHealthಕೈಗಳ ಅಂದ ಹೆಚ್ಚಿಸುವ ʼಮದರಂಗಿʼಯಲ್ಲಿದೆ ಔಷಧೀಯ ಗುಣ

ಕೈಗಳ ಅಂದ ಹೆಚ್ಚಿಸುವ ʼಮದರಂಗಿʼಯಲ್ಲಿದೆ ಔಷಧೀಯ ಗುಣ

ಮದುವೆ ನಿಶ್ಚಿತಾರ್ಥ ಸಮಾರಂಭಗಳಲ್ಲಿ ಹೆಣ್ಣು ಮಕ್ಕಳಿಗೆ ಮೆಹೆಂದಿ ಬೇಕೇ ಬೇಕು. ಕೈಗಳನ್ನು ಕಂಗೊಳಿಸುವಂತೆ ಮಾಡುವ ಈ ಮದರಂಗಿ ಸೊಪ್ಪಿನಲ್ಲಿರುವ ಕೆಲ ಔಷಧೀಯ ಗುಣಗಳು ಏನೇನು ತಿಳಿಬೇಕಾ.

* ಮೆಹೆಂದಿ ಸೊಪ್ಪನ್ನು ಅರೆದು ಅದಕ್ಕೆ ನಿಂಬೆರಸ ಸೇರಿಸಿ ಅಂಗೈ ಅಂಗಾಲುಗಳಿಗೆ ಹಚ್ಚಿದರೆ ಉರಿ ಕಡಿಮೆಯಾಗುತ್ತದೆ.

* ಮೆಹಂದಿ ಎಲೆಗಳನ್ನು ಅರೆದು ಅದರ ಪೇಸ್ಟ್ ಗೆ ಕರ್ಪೂರ ಸೇರಿಸಿ ತಲೆಗೆ ಹಚ್ಚಿದರೆ ಹೇನು ಸೀರು ನಾಶವಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

* ಗೋರಂಟಿ ಕಾಯಿಗಳನ್ನು ಚೆನ್ನಾಗಿ ಅರೆದು ನೀರು ಬೆರೆಸಿ ಕಷಾಯ ಮಾಡಿ ಅದಕ್ಕೆ 25 ಗ್ರಾಂ ನೀಲಿ ದ್ರಾಕ್ಷಿ ಹಾಕಿ ನುಣ್ಣಗೆ ರುಬ್ಬಿಕೊಂಡು ತಲೆಗೆ ಹಚ್ಚಿ ಸ್ನಾನ ಮಾಡಿದರೆ ಬಿಳಿ ಕೂದಲು ಕಡಿಮೆಯಾಗುತ್ತದೆ.

 * ಎರಡು ಹಿಡಿ ಗೋರಂಟಿ ಸೊಪ್ಪನ್ನು ಚೆನ್ನಾಗಿ ಜಜ್ಜಿ ನೀರಿನಲ್ಲಿ ನೆನೆಹಾಕಿ ಆ ನೀರನ್ನು ಶುಭ್ರ ಬಟ್ಟೆಯಲ್ಲಿ ಶೋಧಿಸಿ ದಿನಕ್ಕೆ ಒಂದು ಬಾರಿ ಏಳು ದಿನ ಕುಡಿದರೆ ಕಾಮಾಲೆ ನಿಯಂತ್ರಣಕ್ಕೆ ಬರುತ್ತದೆ.

* ಮದರಂಗಿ ಎಲೆಯ ರಸಕ್ಕೆ ಚಿಟಿಕೆ ಸುಣ್ಣ ಬೆರೆಸಿ ಸೇವಿಸಿದರೆ ತಲೆಸುತ್ತು ಕಡಿಮೆಯಾಗುತ್ತದೆ.

* ಗೋರಂಟಿ ಬೀಜದ ಪುಡಿಗೆ ಶುದ್ಧ ಜೇನು ಬೆರೆಸಿ ಸೇವಿಸಿದರೆ ತಲೆಸುತ್ತು ಕಡಿಮೆಯಾಗುತ್ತದೆ.

* ಹಸಿ ಗೋರಂಟಿ ಸೊಪ್ಪನ್ನು ಜಜ್ಜಿ ಉಂಡೆ ಮಾಡಿ ಹಲ್ಲು ನೋವಿರುವ ಜಾಗಕ್ಕೆ ಇಟ್ಟರೆ ನೋವು ಕಡಿಮೆಯಾಗುತ್ತದೆ.

* ಚರ್ಮವ್ಯಾದಿಗಳಿಗೆ ಹಾಗೂ ಬೆವರುಸಾಲೆಗೆ ಗೋರಂಟಿಯ ರಸ ಹಚ್ಚಬಹುದು.

For Latest News Updates, Join Our Whatsapp Community🚩
RELATED ARTICLES

Most Popular