HomeEntertainment'ಗ್ರೇ ಗೇಮ್ಸ್' ಚಿತ್ರದ ಲಿರಿಕಲ್ ಹಾಡು ರಿಲೀಸ್

‘ಗ್ರೇ ಗೇಮ್ಸ್’ ಚಿತ್ರದ ಲಿರಿಕಲ್ ಹಾಡು ರಿಲೀಸ್

ಗಂಗಾಧರ್ ಸಾಲಿಮಠ ಕಥೆ ಬರೆದು ನಿರ್ದೇಶಿಸಿರುವ ‘ಗ್ರೇ ಗೇಮ್ಸ್’ ಚಿತ್ರದ ಮನಸೆಳೆದೆ ಎಂಬ ಲಿರಿಕಲ್ ಹಾಡೊಂದನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಲಾಗಿದೆ. ಈ ಹಾಡಿಗೆ ಐಶ್ವರ್ಯ ರಂಗರಾಜನ್ ಧ್ವನಿಯಾಗಿದ್ದು, ಶ್ರೀಯಾಂಶ್ ಶ್ರೀರಾಮ್ ಸಂಗೀತ ಸಂಯೋಜನೆ ನೀಡಿದ್ದಾರೆ. ಕಿರಣ್ ಕಾವೇರಪ್ಪ ಸಾಹಿತ್ಯ ಬರೆದಿದ್ದಾರೆ.

ಈ ಚಿತ್ರವನ್ನು ಡೀಸ್ ಫಿಲಂಸ್ ಬ್ಯಾನರ್ ನಲ್ಲಿ ಆನಂದ್ ಹೆಚ್ ಮುಘಡ್ ನಿರ್ಮಾಣ ಮಾಡಿದ್ದು, ಡೋಲೇಶ್ವರ್ ರಾಜ್ ಸುಂಕು, ಅರವಿಂದ್ ಜೋಶಿ, ಸತೀಶ್ ಗ್ರಾಮಪುರೋಹಿತ್ ಸಹ ನಿರ್ಮಾಪಕರಾಗಿದ್ದಾರೆ.

ವಿಜಯ ರಾಘವೇಂದ್ರ, ಶ್ರುತಿ ಪ್ರಕಾಶ್, ಭಾವನಾ ರಾವ್, ಅಪರ್ಣ ವಸ್ತಾರೆ ಮತ್ತು ರವಿ ಭಟ್ ತೆರೆ ಹಂಚಿಕೊಂಡಿದ್ದಾರೆ. ಜಗದೀಶ್ ಎನ್ ಸಂಕಲನ, ಟಗರು ರಾಜು ನೃತ್ಯ ನಿರ್ದೇಶನ, ವರುಣ್ ಡಿಕೆ  ಛಾಯಾಗ್ರಹಣವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular