HomeEntertainmentಇಂದು ರಿಲೀಸ್ ಆಗಲಿದೆ 'ಚಿಲ್ಲಿ ಚಿಕನ್' ಚಿತ್ರದ 'ಹೂವಿನ ಕಾಡು' ಲಿರಿಕಲ್ ಸಾಂಗ್

ಇಂದು ರಿಲೀಸ್ ಆಗಲಿದೆ ‘ಚಿಲ್ಲಿ ಚಿಕನ್’ ಚಿತ್ರದ ‘ಹೂವಿನ ಕಾಡು’ ಲಿರಿಕಲ್ ಸಾಂಗ್

ಪ್ರತೀಕ್ ಪ್ರಜೋಶ್ ಆಕ್ಷನ್ ಕಟ್ ಹೇಳಿರುವ ‘ಚಿಲ್ಲಿ ಚಿಕನ್’ ಚಿತ್ರ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದು, ತೆರೆ ಮೇಲೆ ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದಾರೆ. ಇತ್ತೀಚಿಗಷ್ಟೇ ಕಾವೇರಿ ಚಿತ್ರಮಂದಿರಕ್ಕಾಗಿ ‘ಕಾವೇರಿ ಕಾಣೆಯಾದಳು’ ಎಂಬ  ಹಾಡನ್ನು ಬಿಡುಗಡೆಗೊಳಿಸಿದ್ದ ಚಿತ್ರತಂಡ ಇಂದು ‘ಹೂವಿನ ಕಾಡು’ ಎಂಬ ಲಿರಿಕಲ್ ಹಾಡನ್ನು ರಿಲೀಸ್ ಮಾಡುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ. ಚರಣ್ ರಾಜ್ ಈ ಹಾಡನ್ನು ಲಾಂಚ್ ಮಾಡಲಿದ್ದಾರೆ.

ಈ ಚಿತ್ರವನ್ನು ಮೆಟಾನೋಯಾ ಸ್ಟುಡಿಯೋಸ್ ಫಿಲಂಸ್ ಲಾಂಛನದಲ್ಲಿ ದೀಪ್ ಭೀಮಾಜಿಯಾನಿ ಹಾಗೂ ಸುಧಾ ನಂಬಿಯಾರ್ ನಿರ್ಮಾಣ ಮಾಡಿದ್ದು, ಬಿವಿ ಶೃಂಗಾ, ಬಿಜೌ ತಂಗ್ಜಮ್, ಜಿಂಪಾ ಸಾಂಗ್ಪೋ ಭುಟಿಯಾ, ಹರಿಣಿ ಸುಂದರರಾಜನ್, ವಿಕ್ಟರ್ ತೌಡಮ್, ನಿತ್ಯಶ್ರೀ, ಪದ್ಮಜಾ ರಾವ್, ಹಿರಾಕ್ ಸೋನೋವಾಲ್, ಟಾಮ್ಥಿನ್ ತೊಕ್ಚೋಮ್ ಸೇರಿದಂತೆ ಮೊದಲಾದ ಕಲಾವಿದರು ತೆರೆ ಹಂಚಿಕೊಂಡಿದ್ದಾರೆ. ಆಶಿಕ್ ಕುಸುಗೋಳಿ ಸಂಕಲನ, ತ್ರಿಲೋಕ ತ್ರಿವಿಕ್ರಮ ಸಂಭಾಷಣೆ,  ಶ್ರೀಶ್ ಛಾಯಾಗ್ರಹಣವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular