HomeLatest NewsBIG NEWS : ‘ಕಾಡಲ್ಲಿ ಸಿಂಹನೇ ರಾಜ’ : ನಟ ಕಿಚ್ಚ ಸುದೀಪ್ ಗೆ ನಟ...

BIG NEWS : ‘ಕಾಡಲ್ಲಿ ಸಿಂಹನೇ ರಾಜ’ : ನಟ ಕಿಚ್ಚ ಸುದೀಪ್ ಗೆ ನಟ ದರ್ಶನ್ ಆಪ್ತ ಧನ್ವೀರ್  ಗೌಡ ಟಾಂಗ್.!

ಬೆಂಗಳೂರು : ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಸ್ಟಾರ್ ವಾರ್ ಶುರುವಾಗಿದೆ. ಕಿಚ್ಚ ಸುದೀಪ್ ನೀಡಿದ ಆ ಒಂದು ಹೇಳಿಕೆಯಿಂದ ‘ಡಿ ಬಾಸ್’ ಅಭಿಮಾನಿಗಳು ಸಿಡಿದೆದಿದ್ದಾರೆ. ನಟ ಸುದೀಪ್ ಹೇಳಿಕೆಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ದರ್ಶನ್ ಅಭಿಮಾನಿಗಳು ಕೌಂಟರ್ ನೀಡಿದ್ದರು. ಈ ಬೆನ್ನಲ್ಲೇ ನಟ ದರ್ಶನ್ ಆಪ್ತ ಧನ್ವೀರ್ ಕೂಡ ಸುದೀಪ್ ಹೆಸರು ಹೇಳದೇ ಟಾಂಗ್ ನೀಡಿದ್ದಾರೆ.

‘ಕಾಡಲ್ಲಿ ಎಲ್ಲಾ ಪ್ರಾಣಿ ಇರುತ್ತೆ, ಆದ್ರೆ ಸಿಂಹನೇ ರಾಜ’ ಎಂದು ಹೇಳುವ ಮೂಲಕ ಸುದೀಪ್ ಗೆ ಧನ್ವೀರ್ ಟಾಂಗ್ ನೀಡಿದ್ದಾರೆ.

ಧನ್ವೀರ್ ಗೌಡ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ದರ್ಶನ್ ಜೊತೆಗಿನ ಒಂದು ಫೋಟೋ ಹಂಚಿಕೊಂಡಿದ್ದಾರೆ. ಹಾಗೂ ತಮಿಳು ನಟ ವಿಜಯ್ ಭಾಷಣದ ತುಣುಕೊಂದನ್ನ ಹಂಚಿಕೊಂಡು ಸುದೀಪ್ ಗೆ ಟಾಂಗ್ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಿಚ್ಚ ಸುದೀಪ್ ಹೇಳಿದ್ದೇನು..?
ನಟ ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ ಡಿಸೆಂಬರ್ 25 ರಂದು ಬಿಡುಗಡೆಯಾಗಲಿದೆ. ಹುಬ್ಬಳ್ಳಿಯಲ್ಲಿ ನಡೆದ ಚಿತ್ರದ ಪ್ರಿ ರಿಲೀಸ್ ಇವೆಂಟ್ ಕಾರ್ಯಕ್ರಮದಲ್ಲಿ ಸುದೀಪ್ ಯುದ್ಧದ ಬಗ್ಗೆ ಪ್ರಸ್ತಾಪಿಸಿದ್ದಾರೆ. ನಮ್ಮ ಅಭಿಮಾನಿಗಳು ನೀವು ಸುಮ್ಮನೆ ಇರಬೇಡಿ. ಈ ಕಾರ್ಯಕ್ರಮವನ್ನು ಹುಬ್ಬಳ್ಳಿಯಲ್ಲಿ ಯಾಕೆ ಮಾಡುತ್ತಿದ್ದೇವೆ ಎಂದರೆ ಇಲ್ಲಿಂದ ಮಾತನಾಡಿದರೆ ಕೆಲವೊಬ್ಬರಿಗೆ ತಟ್ಟುತ್ತದೆ. ಅದಕ್ಕೆ ಇಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ ಎಂದಿದ್ದಾರೆ.
ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಮಾತನಾಡಿದ ಸುದೀಪ್, ಯುದ್ಧಕ್ಕೆ ಸಿದ್ಧವಾಗಿದ್ದೇವೆ ಅಂತ ಗುಡುಗಿದ್ದಾರೆ. ಐದು ತಿಂಗಳ ಹಿಂದೆ ‘ಮಾರ್ಕ್’ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿತ್ತು. ಅಂತೆಯೇ ನಾವು ಡಿ. 25ರಂದು ಬರುತ್ತಿದ್ದೇವೆ. ಈ ನಡುವೆ ಒಂದು ಪಡೆ ಯುದ್ಧಕ್ಕೆ ಸಿದ್ಧವಾಗಿದೆ. ನಾವೂ ರೆಡಿಯಾಗಿದ್ದೇವೆ. ಡಿಸೆಂಬರ್ 25ಕ್ಕೆ ಜೋರಾಗಿ ಬಾಗಿಲು ತಟ್ಟುತ್ತಿದ್ದೇವೆ. ಆದರೆ ಹೊರಗಡೆ ಯುದ್ಧಕ್ಕೆ ಒಂದು ಪಡೆ ರೆಡಿಯಾಗುತ್ತಿದ್ದಾರೆ. ನಾವೂ ಸಿದ್ಧರಿದ್ದೇವೆ ಎಂದು ಸುದೀಪ್ ಹೇಳಿದ್ದಾರೆ.

ವಿಜಯಲಕ್ಷ್ಮಿ ಪರೋಕ್ಷ ಟಾಂಗ್
ಈ ನಡುವೆ ದಾವಣಗೆರೆಯಲ್ಲಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಪರೋಕ್ಷ ಟಾಂಗ್ ನೀಡಿದ್ದಾರೆ. ‘ಡೆವಿಲ್’ ಚಿತ್ರ ಪ್ರದರ್ಶನ ಹಿನ್ನೆಲೆಯಲ್ಲಿ ದಾವಣಗೆರೆಗೆ ಭೇಟಿ ನೀಡಿದ್ದ ವಿಜಯಲಕ್ಷ್ಮಿ ಮಾತನಾಡಿ, ದರ್ಶನ್ ಜೈಲಿನಲ್ಲಿದ್ದಾಗ ಕೆಲವರು ಅವರ ಬಗ್ಗೆ, ಅವರ ಅಭಿಮಾನಿಗಳ ಬಗ್ಗೆ ಹೊರಗಡೆ ಹಾಗೂ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಾರೆ. ಟಿವಿ ಸಂದರ್ಶನದಲ್ಲಿ, ಸ್ಟೇಜ್ ಮೇಲೆ ಮಾತಾಡ್ತಾರೆ. ಆದರೆ, ದರ್ಶನ್ ಇದ್ದಾಗ ಮಾತ್ರ ಅವರು ಗೊತ್ತೇ ಆಗದಂತೆ ಇರುತ್ತಾರೆ. ಬೆಂಗಳೂರಿನಲ್ಲಿ ಇದ್ದಾರಾ ಎಂದು ಗೊತ್ತೇ ಆಗದಂತೆ ಇರುತ್ತಾರೆ. ಟೀಕಿಸುವವರ ಬಗ್ಗೆ ದರ್ಶನ್ ತಲೆಕೆಡಿಸಿಕೊಳ್ಳುವುದಿಲ್ಲ. ಬೇಜಾರು ಮಾಡಿಕೊಳ್ಳುವುದಿಲ್ಲ. ದರ್ಶನ್ ಅಭಿಮಾನಿಗಳಾದ ನೀವು ಕೂಡ ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular