HomeKarnatakaರಾಜ್ಯದ `SC-ST’ ವರ್ಗದ ವಿದ್ಯಾರ್ಥಿಗಳ ಗಮನಕ್ಕೆ : `ಪ್ರೈಜ್ ಮನಿ’ ಗೆ ಅರ್ಜಿ ಸಲ್ಲಿಸಲು ಇಂದು...

ರಾಜ್ಯದ `SC-ST’ ವರ್ಗದ ವಿದ್ಯಾರ್ಥಿಗಳ ಗಮನಕ್ಕೆ : `ಪ್ರೈಜ್ ಮನಿ’ ಗೆ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನ

ಬೆಂಗಳೂರು : ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಪ್ರಥಮ ಬಾರಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದವರಿಗೆ ಪ್ರೋತ್ಸಾಹ ಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲಿಸಲು ಡಿಸೆಂಬರ್ 31 ಕೊನೆಯವಾಗಿದೆ.

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಫ್ರೈಜ್ ಮನಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನವಾಗಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆ ಸೂಚನೆ ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರೋತ್ಸಾಹಧನದ ವಿವರ

ದ್ವಿತೀಯ ಪಿಯುಸಿ, 3 ವರ್ಷದ ಪಾಲಿಟೆಕ್ನಿಕ್ ಡಿಪ್ಲೋಮಾ -20,000 ರೂಪಾಯಿ

ಪದವಿ -25,000 ರೂಪಾಯಿ

ಸ್ನಾತಕೋತ್ತರ ಪದವಿ -30,000

ಇಂಜಿನಿಯರಿಂಗ್, ಕೃಷಿ, ವೈದ್ಯಕೀಯ ಪದವಿ-35,000 ರೂಪಾಯಿ ಪ್ರೋತ್ಸಾಹಧನ ಸಿಗಲಿದೆ.

ಹೆಚ್ಚಿನ ಮಾಹಿತಿಗಾಗಿ ಕಲ್ಯಾಣ ಮಿತ್ರ 24*7 ಸಹಾಯವಾಣಿ 9482300400 ಅಥವಾ @SWDGok ಗೆ ಸಂಪರ್ಕಿಸಬಹುದು.

For Latest News Updates, Join Our Whatsapp Community🚩
RELATED ARTICLES

Most Popular