‘ಸಿಟಿ ಹೆಂಡ್ತಿ’ ಹಳ್ಳಿಗೆ ಬರ್ತಿಲ್ಲ ಅಂತ ಆತ್ಮಹತ್ಯೆಗೆ ಶರಣಾದ ‘ಗಂಡ’

ಚಾಮರಾಜನಗರ : ಸಿಟಿಯಲ್ಲಿದ್ದ ಹೆಂಡತಿ ಮನೆಗೆ ಬರಲಿಲ್ಲ ಎಂದು ಗಂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಸಿಟಿ ಬಿಟ್ಟು ಹಳ್ಳಿಗೆ ಬಾ ಎಂದು ಗಂಡ ಗೋಗರೆದರೂ ಹೆಂಡತಿ ಬರಲಿಲ್ಲ, ಇದರಿಂದ ನೊಂದ ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಏನಿದು ಘಟನೆ

ಚಾಮರಾಜನಗರ ಜಿಲ್ಲೆಯ ಹೊನ್ನಹಳ್ಳಿಯ ಯುವಕ ವಸಂತ್ ಕುಮಾರ್ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಅಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು (ವಸಂತ್) ಯುವಕನಿಗೆ ಪರಿಚಯವಾಗಿತ್ತು. ಇಬ್ಬರ ನಡುವೆ ಪ್ರೀತಿ ಚಿಗುರಿ ಮದುವೆಯಾದರು. ಮೊದಲು ಎಲ್ಲವೂ ಬಹಳ ಚೆನ್ನಾಗಿಯೇ ಇತ್ತು. ಇಬ್ಬರು ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಒಟ್ಟಿಗೆ ಖುಷಿ ಖುಷಿಯಾಗಿಯೇ ಇದ್ದರು. ಆದರೆ ವಸಂತ್ ಕುಮಾರ್ ಗೆ ಯಾಕೋ ಬೆಂಗಳೂರು ಬೋರ್ ಎನಿಸಿತು. ಹೆಂಡತಿಯನ್ನು ಕಟ್ಟಿಕೊಂಡು ಹಳ್ಳಿಗೆ ಹೋದನು. ಆದರೆ ಆಕೆಗೆ ಹಳ್ಳಿ ಹಿಡಿಸಲಿಲ್ಲ. ಆಕೆ ವಾಪಸ್ ಬೆಂಗಳೂರಿಗೆ ಬಂದಳು. ಅಲ್ಲದೇ ಗಂಡನನ್ನು ಕೂಡ ವಾಪಸ್ ಬರುವಂತೆ ಕರೆದಳು. ಆದರೆ ಗಂಡ ವಸಂತ್ ಕುಮಾರ್ ಮಾತ್ರ ಸಿಟಿಗೆ ಬರಲು ಒಪ್ಪಲಿಲ್ಲ. ಆಕೆ ಗಂಡನನ್ನು ಬಿಟ್ಟು ಬೆಂಗಳೂರಿಗೆ ಹೋದಳು.

ಎಷ್ಟೇ ಕರೆದರೂ ಹೆಂಡತಿ ಹಳ್ಳಿಗೆ ಬರುತ್ತಿಲ್ಲ ಎಂದು ಮನನೊಂದ ಗಂಡ ವಸಂತ್ ಕುಮಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಚಾಮರಾಜ ನಗರ ಜಿಲ್ಲೆಯ ಹೊನ್ನಹಳ್ಳಿಯ ವಸಂತಕುಮಾರ್ ಎಂದು ಗುರುತಿಸಲಾಗಿದೆ. ಹೆಂಡತಿ ಇಲ್ಲದೇ ಒಬ್ಬಂಟಿಯಾದ ಸಂತೋಷ್, ಹೆಂಡತಿ ಹಳ್ಳಿಗೆ ಬರುತ್ತಿಲ್ಲ ಎಂದು ಮನನೊಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read