HomeEntertainmentಇಂದು ಬಿಡುಗಡೆಯಾಗಲಿದೆ ‘ಗ್ರೇ ಗೇಮ್ಸ್’ ಚಿತ್ರದ ಮೊದಲ ಹಾಡು

ಇಂದು ಬಿಡುಗಡೆಯಾಗಲಿದೆ ‘ಗ್ರೇ ಗೇಮ್ಸ್’ ಚಿತ್ರದ ಮೊದಲ ಹಾಡು

ಈಗಾಗಲೇ ತನ್ನ ಟೈಟಲ್ ನಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಅಭಿನಯದ ‘ಗ್ರೇ ಗೇಮ್ಸ್’ ಚಿತ್ರದ ಮೊದಲ ಹಾಡು ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್  ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರ ತಂಡ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿದೆ.

ಗಂಗಾಧರ್ ಸಾಲಿಮಠ್‍ ನಿರ್ದೇಶನದ ಫ್ಯಾಮಿಲಿ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ಡೇಸ್ ಫಿಲಂ ಬ್ಯಾನರ್ ನಲ್ಲಿ ಆನಂದ್ ಮುಕಾಡ್ ನಿರ್ಮಾಣ ಮಾಡಿದ್ದಾರೆ, ಡೋಲೇಶ್ವರ್ ರಾಜ್ ಸುಂಕು, ಅರವಿಂದ್ ಜೋಶಿ ಮತ್ತು ಸತೀಶ್ ಗ್ರಾಮ ಪುರೋಹಿತ್ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ.

ವಿಜಯ ರಾಘವೇಂದ್ರ ಸೇರಿದಂತೆ ಶ್ರುತಿ ಪ್ರಕಾಶ್, ಭಾವನಾ ರಾವ್, ಅಪರ್ಣ, ರವಿ ಭಟ್ ತಾರಾ ಬಳಗದಲ್ಲಿದ್ದಾರೆ. ವರುಣ್‍ ಡಿ.ಕೆ  ಛಾಯಾಗ್ರಹಣ ಜಗದೀಶ್ ಎನ್ ಸಂಕಲನವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular