HomeEntertainmentಆಗಸ್ಟ್ 26ಕ್ಕೆ 'ಭುವನಂ ಗಗನಂ' ಚಿತ್ರದ ಮೊದಲ ಹಾಡು

ಆಗಸ್ಟ್ 26ಕ್ಕೆ ‘ಭುವನಂ ಗಗನಂ’ ಚಿತ್ರದ ಮೊದಲ ಹಾಡು

ತನ್ನ ಶೀರ್ಷಿಕೆಯಿಂದಲೇ ಸಿನಿ ಪ್ರೇಕ್ಷಕರ ಗಮನ ಸೆಳೆದಿದ್ದ ಪೃಥ್ವಿ ಅಂಬಾರ್ ನಟನೆಯ ‘ಭುವನಂ ಗಗನಂ’ ಚಿತ್ರದ ಮೊದಲ ಹಾಡು ಆಗಸ್ಟ್ 26ರಂದು ಯೂಟ್ಯೂಬ್ ನಲ್ಲಿ ರಿಲೀಸ್ ಆಗಲಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಗಿರೀಶ್ ಮೂಲಿಮನಿ ನಿರ್ದೇಶನದ ಈ ಚಿತ್ರದಲ್ಲಿ ಪೃಥ್ವಿ ಅಂಬಾರ್ ಸೇರಿದಂತೆ ರಚಿಲ್ ಡೇವಿಡ್, ಪ್ರಮೋದ್, ಪೊನ್ನು ಅಶ್ವತಿ, ಶರತ್ ಲೋಹಿತಾಶ್ವ,  ಹಾಗೂ ಅಚ್ಯುತ್ ಕುಮಾರ್ ಪ್ರಮುಖ ಪಾತ್ರದಲ್ಲಿದ್ದಾರೆ, ಎಸ್ ವಿ ಸಿ ಫಿಲಂಸ್ ಬ್ಯಾನರ್ ನಲ್ಲಿ ಎಮ್ ಮುನೇಗೌಡ ನಿರ್ಮಾಣ ಮಾಡಿದ್ದು, ಗುಮ್ಮನೇನಿ ವಿಜಯ್ ಸಂಗೀತ ಸಂಯೋಜನೆ ನೀಡಿದ್ದಾರೆ, ಸುನೀಲ್ ಕಶ್ಯಪ್ ಸಂಕಲನ, ಉದಯ್ ಲೀಲಾ ಛಾಯಾಗ್ರಹಣ, ಗಿರೀಶ್ ಮೂಲಿಮನಿ ಹಾಗೂ ಪ್ರಸನ್ನ ಎಂ ಅವರ ಸಂಭಾಷಣೆ, ಹಾಗೂ ಡಾಕ್ಟರ್ ಕೆ ರವಿವರ್ಮ,  ಥ್ರಿಲ್ಲರ್ ಮಂಜು, ಅರ್ಜುನ್ ರಾಜ್ ಮತ್ತು ನರಸಿಂಹ ಅವರ ಸಾಹಸ ನಿರ್ದೇಶನವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular