HomeEntertainment'ಇಬ್ಬನಿ ತಬ್ಬಿದ ಇಳೆಯಲಿ' ಚಿತ್ರದ ಮೊದಲ ಹಾಡು ರಿಲೀಸ್

‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದ ಮೊದಲ ಹಾಡು ರಿಲೀಸ್

ಚಂದ್ರಜಿತ್ ಬೆಳ್ಳಿಯಪ್ಪ ರಚಿಸಿ ನಿರ್ದೇಶಿಸಿರುವ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದ ಮೊದಲ ಗೀತೆ ಪರಂವಾ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಓ ಅನಾಹಿತ ಎಂಬ ಈ ಹಾಡಿಗೆ ಕಪಿಲ್ ಕಪಿಲನ್ ಧ್ವನಿಯಾಗಿದ್ದು, ಚಂದ್ರಜಿತ್ ಬೆಳ್ಳಿಯಪ್ಪ ಸಾಹಿತ್ಯ ಬರೆದಿದ್ದಾರೆ.

ಈ ಚಿತ್ರವನ್ನು ಗಗನ್ ಬದರಿಯಾ ನಿರ್ಮಾಣ ಮಾಡಿದ್ದು, ವಿಹಾನ್ ಮತ್ತು ಅಂಕಿತ ಅಮರ್ ನಾಯಕ – ನಾಯಕಿಯಾಗಿದ್ದಾರೆ. ಇನ್ನುಳಿದಂತೆ ಗಿರಿಜಾ ಶೆಟ್ಟರ್, ಮಯೂರಿ ನಟರಾಜ, ಸಲ್ಮಿನ್ ಶೆರಿಫ್ ಉಳಿದ ಪಾತ್ರ ವರ್ಗದಲ್ಲಿದ್ದಾರೆ. ಗಗನ್ ಬದರಿಯಾ ಸಂಗೀತ ಸಂಯೋಜನೆ ನೀಡಿದ್ದು. ರಕ್ಷಿತ್ ಸಂಕಲನ, ಶ್ರೀವತ್ಸನ್ ಸೆಲ್ವರಾಜನ್ ಛಾಯಾಗ್ರಹಣ, ಚಂದ್ರಜಿತ್ ಬೆಳ್ಳಿಯಪ್ಪ ಅವರ ಸಂಭಾಷಣೆ, ದೀಕ್ಷಿತ್ ಕುಮಾರ್ ನೃತ್ಯ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular