HomeEntertainmentಸೆಪ್ಟೆಂಬರ್ 18ಕ್ಕೆ ಬಿಡುಗಡೆಯಾಗಲಿದೆ ಭೀಮ ಚಿತ್ರದ ಮೊದಲ ಹಾಡು

ಸೆಪ್ಟೆಂಬರ್ 18ಕ್ಕೆ ಬಿಡುಗಡೆಯಾಗಲಿದೆ ಭೀಮ ಚಿತ್ರದ ಮೊದಲ ಹಾಡು

ದುನಿಯಾ ವಿಜಯ್  ನಟಿಸಿ ನಿರ್ದೇಶಿಸಿರುವ ‘ಭೀಮ’ ಸಿನಿಮಾ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು ಇನ್ನೇನು ಬಿಡುಗಡೆಗೆ ಸಜ್ಜಾಗಿದೆ.

ಈ ಚಿತ್ರದ ‘ಬ್ಯಾಡ್ ಬಾಯ್ಸ್’ ಎಂಬ ಹಾಡು ಇದೇ ಸೆಪ್ಟೆಂಬರ್ 18ರಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ದುನಿಯಾ ವಿಜಯ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಚಿತ್ರವನ್ನು ಜಗದೀಶ್ ಫಿಲಂಸ್ ಹಾಗೂ ಕೃಷ್ಣ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ಜಗದೀಶ್ ಗೌಡ ಮತ್ತು ಕೃಷ್ಣ ಸಾರ್ಥಕ್ ನಿರ್ಮಾಣ ಮಾಡಿದ್ದು, ಚರಣ್ ರಾಜ್ ಸಂಗೀತ ಸಂಯೋಜನೆ ನೀಡಿದ್ದಾರೆ. ಜಯಮ್ಮನ ಮಗ ಖ್ಯಾತಿಯ ಕಲ್ಯಾಣಿ ರಾಜು ಸೇರಿದಂತೆ ಅಶ್ವಿನಿ, ಗಿಳಿ ಚಂದ್ರು, ಬ್ಲಾಕ್ ಡ್ರಾಗನ್ ಮಂಜು, ತೆರೆ ಹಂಚಿಕೊಂಡಿದ್ದಾರೆ. ಶಿವಸೇನಾ ಛಾಯಾಗ್ರಹಣವಿದ್ದು, ದೀಪು ಎಸ್ ಕುಮಾರ್ ಸಂಕಲವಿದೆ.

For Latest News Updates, Join Our Whatsapp Community🚩
RELATED ARTICLES

Most Popular