HomeKarnatakaರಾಜ್ಯದಲ್ಲಿ ಏ. 1 ರಿಂದ ಜನಗಣತಿಯ ಮೊದಲ ಹಂತ ಆರಂಭ

ರಾಜ್ಯದಲ್ಲಿ ಏ. 1 ರಿಂದ ಜನಗಣತಿಯ ಮೊದಲ ಹಂತ ಆರಂಭ

ಬೆಂಗಳೂರು: ಏಪ್ರಿಲ್ 1ರಿಂದ 15ರವರೆಗೆ ರಾಜ್ಯದಲ್ಲಿ ಜನಗಣತಿಯ ಮೊದಲ ಹಂತ ಸ್ವಯಂ ಗಣತಿ, ಏಪ್ರಿಲ್ 16 ರಿಂದ ಮೇ 15 ರವರೆಗೆ ಮನೆ ಪಟ್ಟಿ ಮತ್ತು ಮನೆಗಣತಿ ನಡೆಯಲಿದೆ. 30 ದಿನಗಳ ಅವಧಿಯಲ್ಲಿ ಮನೆ ಪಟ್ಟಿ ಮತ್ತು ಮನೆ ಗಣತಿ ಮಾಡಲಾಗುವುದು.

ಜನಗಣತಿ ಗೌಪ್ಯತೆಯ ಖಾತರಿಯಾಗಿದ್ದು, ನಿಮ್ಮ ಮಾಹಿತಿ ಸಂಪೂರ್ಣ ಸುರಕ್ಷಿತವಾಗಿರುತ್ತದೆ. 1948ರ ಜನಗಣತಿ ಕಾಯ್ದೆಯ ಅಡಿಯಲ್ಲಿ ಸಂಪೂರ್ಣ ಗೌಪ್ಯತೆ ಕಾಯ್ದುಕೊಳ್ಳಲಾಗುವುದು. ಸುರಕ್ಷಿತ ಸರ್ವರ್ ಗಳಲ್ಲಿ ಮಾಹಿತಿಗಳನ್ನು ಎನ್ ಕ್ರಿಪ್ಟ್ ಮಾಡಲಾಗುವುದು. ವರದಿಗಳಲ್ಲಿ ಒಟ್ಟು ಅಂಕಿ ಅಂಶಗಳನ್ನು ಮಾತ್ರ ಪ್ರಕಟಿಸಲಾಗುವುದು. ಹೆಸರುಗಳು ಮತ್ತು ವಿಳಾಸಗಳ ಗೌಪ್ಯತೆ, ತೆರಿಗೆ, ಪೊಲೀಸ್ ಅಥವಾ ತನಿಖೆಯಲ್ಲಿ ಬಳಕೆ ಮಾಡುವುದಿಲ್ಲ.

ಕೇಂದ್ರ ಗೃಹ ಮಂತ್ರಾಲಯವು 2027 ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲು ಉದ್ದೇಶಿಸಿದ್ದು ಮೊದಲ ಹಂತವಾದ , 3 (HLO) (Phase-l, Houselisting and Housing Census (HLO)) 15 (https://se.census.gov.in) ಮೂಲಕ ಸ್ವಯಂ-ಗಣತಿ (SE)ಗೆ ಅವಕಾಶವಿರುತ್ತದೆ. ಅದರಂತೆ, ಮನೆಯ ಯಾವುದೇ ಒಬ್ಬ ಸದಸ್ಯರು ಸುಮಾರು 15-20 ನಿಮಿಷಗಳ ಅವಧಿಯಲ್ಲಿ ಸ್ವಯಂ-ಗಣತಿ ಮಾಡಿ ಮನೆಯ ವಿವರಗಳನ್ನು ಒದಗಿಸಬಹುದು ಮತ್ತು ಮೊಬೈಲ್/ಇಮೇಲ್ನಲ್ಲಿ ಸ್ವಯಂ-ಗಣತಿ ಐಡಿ (SE ID) ಪಡೆಯಬಹುದಾಗಿದೆ. ಗಣತಿದಾರರು ಮನೆಗೆ ಭೇಟಿ ನೀಡಿದಾಗ, ದೃಢೀಕರಿಸಲು ಮತ್ತು ಸ್ವಯಂ-ಗಣತಿ ದತ್ತಾಂಶದ ಅಂತಿಮ ಸಲ್ಲಿಕೆಗಾಗಿ SE ID ಯನ್ನು ಅವರೊಂದಿಗೆ ಹಂಚಿಕೊಳ್ಳಬೇಕಾಗಿರುತ್ತದೆ. ಸದರಿ ಸ್ವಯಂ-ಗಣತಿ (Self Enumeration) ಭಾಗವಹಿಸುವಿಕೆಯನ್ನು ಸುಗಮಗೊಳಿಸಲು, ಸ್ವಯಂ-ಗಣತಿಯ ಹಂತ-ಹಂತದ ಪ್ರಕ್ರಿಯೆಯನ್ನು ವಿವರಿಸುವ ಬಳಕೆದಾರ ಮಾರ್ಗದರ್ಶಿಯನ್ನು ಅನುಬಂಧ || ರಲ್ಲಿ ನೀಡಲಾಗಿರುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಕುರಿತು, ಕರ್ನಾಟಕ ರಾಜ್ಯದಲ್ಲಿ 2027 ರ ಜನಗಣತಿಯ ಮೊದಲ ಹಂತವಾದ ಮನೆಗಳ ಪಟ್ಟಿ ಮತ್ತು ಮನೆ ಗಣತಿ (HLO) ಯ ಸ್ವಯಂ-ಗಣತಿ (Self Enumeration) ಯನ್ನು ದಿನಾಂಕ: 01.04.2026 ರಿಂದ 15.04.2026ರ ವರೆಗೆ 15 ದಿನಗಳ ಕಾಲ ನಡೆಸಲು ಉದ್ದೇಶಿಸಿ, ಉಲ್ಲೇಖ (2)ರಲ್ಲಿ ಅಧಿಸೂಚನೆಯನ್ನು ಹೊರಡಿಸಲಾಗಿರುತ್ತದೆ.

ಅದರಂತೆ, 2027 ರ ಭಾರತದ ಜನಗಣತಿಯ ಮೊದಲ ಹಂತವಾದ ಮನೆಗಳ ಪಟ್ಟಿ ಮತ್ತು ಮನೆ ಗಣತಿ (HLO) ಯ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸ್ವಯಂ-ಗಣತಿ (Self Enumeration) ಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರ ಭಾಗವಹಿಸುವಿಕೆಯನ್ನು ಸುಗಮಗೊಳಿಸಲು ಭಾರತ ಸರ್ಕಾರವು ಅಭಿವೃದ್ಧಿ ಪಡಿಸಿರುವ ವೆಬ್ ಪೋರ್ಟಲ್ (https://se.census.gov.in) ថ ជ ថថ ಬಗ್ಗೆ ಸರ್ಕಾರದ ಎಲ್ಲಾ ಇಲಾಖೆಗಳು ಮತ್ತು ಸರ್ಕಾರದ ಅಧೀನಕ್ಕೆ ಒಳಪಡುವ ಎಲ್ಲಾ ನಿಗಮ/ಮಂಡಳಿ ಇತ್ಯಾದಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ/ಸಿಬ್ಬಂದಿಗಳು ಸೇರಿದಂತೆ ಮೂಡಿಸುವಂತೆ ಎಲ್ಲಾ ನಾಗರಿಕರು/ಗಣತಿದಾರರಿಗೆ ಅರಿವು ನಾಗರಿಕರು/ಉದ್ಯೋಗಿಗಳು/ಗಣತಿದಾರರಿಗೆ ಅರಿವು ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ದಿನಾಂಕ: 01.04.2026 ರಿಂದ 15.04.2026ರ ವರೆಗೆ 15 ದಿನಗಳ ಕಾಲ ನಮ್ಮ ರಾಜ್ಯದಲ್ಲಿ ನಡೆಯಲಿರುವ ಮನೆಗಳ ಪಟ್ಟಿ ಮತ್ತು ಮನೆ ಗಣತಿ (HLO)ಯ ಸ್ವಯಂ-ಗಣತಿ (Self Enumeration) ಯನ್ನು ಯಶಸ್ವಿಗೊಳಿಸಲು ಜರೂರಾಗಿ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular