ರಾಜ್ಯದ ಎಲ್ಲಾ ಶಾಲೆಗಳಲ್ಲಿ ‘ಶಿಕ್ಷಾ ಸಪ್ತ’ ಕಾರ್ಯಕ್ರಮ ಅನುಷ್ಠಾನಗೊಳಿಸುವಂತೆ ಶಿಕ್ಷಣ ಇಲಾಖೆ ಸುತ್ತೋಲೆ

ಬೆಂಗಳೂರು : ಶಿಕ್ಷಣ ಮಂತ್ರಾಲಯ ಸೂಚನೆಯಂತೆ “ಶಿಕ್ಷಾ ಸಪ್ತ ” ಕಾರ್ಯಕ್ರಮಗಳನ್ನು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಅನುಷ್ಠಾನಗೊಳಿಸುವಂತೆ ಸಮಗ್ರ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಶಿಕ್ಷಣ ಮಂತ್ರಾಲಯದ ಸೂಚನೆಯಂತೆ ರಾಷ್ಟ್ರಾದ್ಯಂತ ಶಿಕ್ಷಾ ಸಪ್ತ “ ಕಾರ್ಯಕ್ರಮವನ್ನು ಕಲಿಕೆ ಮತ್ತು ಅಭಿವೃದ್ಧಿಯ ವಿವಿಧ ಅಂಶಗಳನ್ನು ಕೇಂದ್ರೀಕರಿಸುವ ವಾರದ ಆವಧಿಯ ಕಾರ್ಯಕ್ರಮವನ್ನು 2024ರ ಜುಲೈ 22 ರಿಂದ 28ರವರೆಗೆ ಆಚರಿಸಲಾಗುತ್ತದೆ.

ಶಿಕ್ಷಣ ಕ್ಷೇತ್ರದಲ್ಲಿ ಕಲಿಯುವ ವಿದ್ಯಾರ್ಥಿಗಳು, ಶಿಕ್ಷಕರು, ನೀತಿ ನಿರೂಪಕರು ಮತ್ತು ಪಾಲುದಾರರ ನಡುವೆ ಸಂಯೋಗ ಮತ್ತು ನಾವೀನ್ಯತೆಯ ಮನೋಭಾವವನ್ನು ಬೆಳೆಸುವ ಗುರಿಯನ್ನು ಶಿಕ್ಷಣ ಸಪ್ತಾಹ ಹೊಂದಿದೆ. ಇದು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು, ಸವಾಲುಗಳನ್ನು ಚರ್ಚಿಸಲು ಮತ್ತು ಗುಣಮಟ್ಟದ ದೃಷ್ಟಿಕೋನವನ್ನು ತಳಮಟ್ಟದಲ್ಲಿ ಸಾಕಾರಗೊಳಿಸುವ ನಿಟ್ಟಿನಲ್ಲಿ ಮುಂದಿನ ಹಾದಿಯನ್ನು ರೂಪಿಸಲು ಒಂದು ವೇದಿಕೆಯನ್ನು ಒದಗಿಸುತ್ತದೆ. ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಆಯೋಜಿಸಲಾಗಿರುವ ಈ ಕಾರ್ಯಕ್ರಮವು ನಿಪುಣ್ ಭಾರತ್ ಹಾಗೂ ಇತರೆ ಕಾರ್ಯಕ್ರಮಗಳು ಅನುಷ್ಠಾನಗೊಂಡ ಕಳೆದ 4 ವರ್ಷಗಳಲ್ಲಿ ಗಳಿಸಿದ ಸಾಧನೆಗಳ ಉತ್ಸಾಹವನ್ನು ಪ್ರತಿಧ್ವನಿಸಲು ಒಂದು ಸಾಮಾನ್ಯ ವೇದಿಕೆಯನ್ನು ಪ್ರಸ್ತುತ ಪಡಿಸುವ ಗುರಿಯನ್ನು ಹೊಂದಿದೆ. ವಾರದ ಪ್ರತಿಯೊಂದು ದಿನವು ಒಂದು ನಿರ್ದಿಷ್ಟ ವಿಷಯಕ್ಕೆ ಮೀಸಲಾಗಿದ್ದು, ಶಿಕ್ಷಣ ಮತ್ತು ಅಭಿವೃದ್ಧಿಯ ವಿವಿಧ ಅಂಶಗಳನ್ನು ಪ್ರದರ್ಶಿಸುತ್ತದೆ.

ರಾಜ್ಯದ ಸರ್ಕಾರಿ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಪರಿಣಾಮಕಾರಿಯಾಗಿ “ಶಿಕ್ಷಾ ಸಪ್ತ” ಕಾರ್ಯಕ್ರಮವನ್ನು ನಿರ್ವಹಿಸಲು ಆಚರಿಸಬೇಕಾದ ಯೋಜಿತ ದಿನಗಳ ವಿವರಗಳನ್ನು ಕೆಳಗೆ ನೀಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read