HomeKarnatakaBREAKING : ಕೆರಗೋಡು ಗ್ರಾಮದಲ್ಲಿ ಪರಿಸ್ಥಿತಿ ಉದ್ವಿಗ್ನ : ವಿವಾದಿತ ಧ್ವಜ ಸ್ಥಂಭದ ಮೇಲೆ 'ತ್ರಿವಣ...

BREAKING : ಕೆರಗೋಡು ಗ್ರಾಮದಲ್ಲಿ ಪರಿಸ್ಥಿತಿ ಉದ್ವಿಗ್ನ : ವಿವಾದಿತ ಧ್ವಜ ಸ್ಥಂಭದ ಮೇಲೆ ‘ತ್ರಿವಣ ಧ್ವಜ’ ಹಾರಿಸಿದ ಜಿಲ್ಲಾಡಳಿತ

ಮಂಡ್ಯ : ಕೆರಗೋಡು ಗ್ರಾಮದಲ್ಲಿ ಹನುಮಾನ್ ಧ್ವಜ ವಿವಾದ ತಾರಕಕ್ಕೇರಿದ್ದು, ಪೊಲೀಸರು ಹಾಗೂ ಹೋರಾಟಗಾರರ ನಡುವೆ ಭಾರಿ ಹೋರಾಟ ನಡೆದಿದೆ.

ವಿವಾದಿತ ಧ್ವಜ ಸ್ಥಂಭದ ಮೇಲೆ ಜಿಲ್ಲಾಡಳಿತ ತ್ರಿವಣ ಧ್ವಜ ಹಾರಿಸಿದೆ. ಎಸಿ ನೇತೃತ್ವದಲ್ಲಿ ಪೊಲೀಸರು ಭಾರತದ ತ್ರಿವಣ ಧ್ವಜವನ್ನು ಹಾರಿಸಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ಬ್ಯಾರಿಕೇಡ್ ಎತ್ತಿ ಪೊಲೀಸರ ಮೇಲೆ ಎಸೆದಿದ್ದಾರೆ. ಪೊಲೀಸರು ಕೂಡ ಪ್ರತಿಭಟನಾಕಾರರ ಮೇಲೆ ಲಾಠಿ ಬೀಸಿದರು.

ಕೆರಗೋಡು ಗ್ರಾಮದಲ್ಲಿ 108 ಅಡಿ ಎತ್ತರದಲ್ಲಿ ಕಟ್ಟಲಾಗಿದ್ದ ಹನುಮ ಧ್ವಜವನ್ನು ಜಿಲ್ಲಾಡಳಿತ ತೆರವುಗೊಳಿಸಿದ ಬೆನ್ನಲ್ಲೇ ನಿಷೇಧಾಜ್ಞೆ ಉಲ್ಲಂಘಿಸಿ ಗ್ರಾಮಸ್ಥರು, ಹಿಂದೂಪರ ಸಂಘಟನೆ ಕಾರ್ಯಕರ್ತರ ಸಮ್ಮುಖದಲ್ಲಿ ಮಹಿಳೆಯರು ಏಣಿ ಮೂಲಕ ಧ್ವಜಸ್ತಂಭ ಹತ್ತಿ ಶ್ರೀರಾಮನ ಫ್ಲೆಕ್ಸ್ ಹಾಗೂ ಕೇಸರಿ ಧ್ವಜವನ್ನು ಕಟ್ಟಿದ್ದರು. ಅಲ್ಲದೇ ಕೇಸರಿ ಬಾವುಟಗಳನ್ನು ಹಿಡಿದು ಗ್ರಾಮಸ್ಥರು ಧ್ವಜಸ್ತಂಭದ ಬಳಿ ನೆರೆದಿದ್ದರು. ಧ್ವಜಸ್ತಂಭದಲ್ಲಿ ಕಟ್ಟಿದ್ದ ಫ್ಲೆಕ್ಸ್ ಹಾಗೂ ದ್ವಜವನ್ನು ತೆರವುಗೊಳಿಸಲು ಮುಂದಾದ ಪೊಲಿಸರು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ.. ಈ ವೇಳೆ ಪೊಲೀಸರು ಹಾಗೂ ಯುವಕರ ನಡುವೆ ವಾಗ್ವಾದ ನಡೆದಿದ್ದು, ಯುವಕರನ್ನು ಚದುರಿಸಲು ಪೊಲೀಸರು ಮತ್ತೆ ಲಘು ಲಾಠಿ ಪ್ರಹಾರ ನಡೆಸಿದ್ದಾರೆ., ಸ್ಥಳದಲ್ಲಿ ಉದ್ಬಿಗ್ನ ವಾತಾವರಣ ನಿರ್ಮಾಣವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular