HomeInternationalಚಿಲಿಯಲ್ಲಿ ನಿರಂತರ ಕಾಡ್ಗಿಚ್ಚು: ಮೃತಪಟ್ಟವರ ಸಂಖ್ಯೆ 99 ಕ್ಕೆ ಏರಿಕೆ:

ಚಿಲಿಯಲ್ಲಿ ನಿರಂತರ ಕಾಡ್ಗಿಚ್ಚು: ಮೃತಪಟ್ಟವರ ಸಂಖ್ಯೆ 99 ಕ್ಕೆ ಏರಿಕೆ:

ದಕ್ಷಿಣ ಅಮೆರಿಕದ ಚಿಲಿ ದೇಶದಲ್ಲಿ ಕಾಡ್ಗಿಚ್ಚಿಗೆ 99 ಜನ ಬಲಿಯಾಗಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಸಾವಿರಾರು ಮನೆಗಳು ಕಾರ್, ಬೈಕ್ ಗಳು ಸುಟ್ಟು ಭಸ್ಮವಾಗಿವೆ.

ಭೀಕರ ಕಾಡ್ಗಿಚ್ಚಿನಿಂದಾಗಿ ವಾಲ್ಪಾರೈಸೊ ಪ್ರದೇಶದಲ್ಲಿ ಕನಿಷ್ಠ 99 ಸಾವುಗಳು ಈಗಾಗಲೇ ದಾಖಲಾಗಿವೆ. ನೂರಾರು ಜನರು ಕಾಣೆಯಾಗಿದ್ದಾರೆ.

ಸ್ಯಾಂಟಿಯಾಗೊದ ವಾಯುವ್ಯಕ್ಕೆ ಸುಮಾರು 120 ಕಿಮೀ ದೂರದಲ್ಲಿರುವ, ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದಾದ ವಿನಾ ಡೆಲ್ ಮಾರ್ ನಗರದಲ್ಲಿ ಸುಟ್ಟ ಕಲ್ಲುಮಣ್ಣುಗಳಿಂದ ತುಂಬಿದ ಬೀದಿಗಳ ನಡುವೆ ಆಶ್ರಯ ಇಲ್ಲದ ಸಂತ್ರಸ್ತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಾಲ್ಪಾರೈಸೊದ ನಾಲ್ಕು ಪುರಸಭೆಗಳ ವ್ಯಾಪ್ತಿಯಲ್ಲಿ ರಕ್ಷಣೆ, ಅಗತ್ಯ ನೆರವು, ವೈದ್ಯಕೀಯ ಸೌಲಭ್ಯ ನೀಡುವ ನಿಟ್ಟಿನಲ್ಲಿ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಆಂತರಿಕ ಸಚಿವ ಕೆರೊಲಿನಾ ತೋಹಾ ತಿಳಿಸಿದ್ದಾರೆ.

ಸಾವಿನ ಸಂಖ್ಯೆ 64 ಆಗಿತ್ತು. ಆದರೆ ಈ ಸಂಖ್ಯೆಯು ಗಮನಾರ್ಹವಾಗಿ ಹೆಚ್ಚಾಗುತ್ತದೆ ಎಂದು ಚಿಲಿಯ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಹೇಳಿದ್ದಾರೆ. ಸ್ಯಾಂಟಿಯಾಗೊದಿಂದ 90 ಕಿಮೀ ದೂರದಲ್ಲಿರುವ ಧ್ವಂಸಗೊಂಡ ಕ್ವಿಲ್ಪುಯಲ್ಲಿ ಅವರು ಮಾತನಾಡಿದರು.

ಶುಕ್ರವಾರದ ಬೆಂಕಿಯು ವಿನಾಶಕಾರಿ ಹಾನಿಯನ್ನುಂಟು ಮಾಡಿದೆ. ಇದು 2010 ರ ಭೂಕಂಪದ ನಂತರ ನಾವು ಅನುಭವಿಸಿದ ಅತಿದೊಡ್ಡ ದುರಂತವಾಗಿದೆ ಎಂದು ಬೋರಿಕ್ ಹೇಳಿದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular