HomeBeautyಆಕರ್ಷಕ ತ್ವಚೆ ಪಡೆಯಲು ಅತ್ಯುತ್ತಮ ʼಮುಲ್ತಾನಿ ಮಿಟ್ಟಿʼ

ಆಕರ್ಷಕ ತ್ವಚೆ ಪಡೆಯಲು ಅತ್ಯುತ್ತಮ ʼಮುಲ್ತಾನಿ ಮಿಟ್ಟಿʼ

ಮುಖದ ತ್ವಚೆಯನ್ನು ರಕ್ಷಣೆ ಮಾಡಿ ಅದು ಹೊಳೆಯುವಂತೆ ಮಾಡುವಲ್ಲಿ ಮುಲ್ತಾನಿ ಮಿಟ್ಟಿಯ ಪಾತ್ರ ದೊಡ್ಡದು. ಕಡಿಮೆ ಖರ್ಚಿನಲ್ಲಿ ಆಕರ್ಷಕ ತ್ವಚೆ ಪಡೆಯಲು ಇದನ್ನು ಅನುಸರಿಸುವುದು ಅತ್ಯುತ್ತಮ ವಿಧಾನ.

ಮುಲ್ತಾನಿ ಮಿಟ್ಟಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿದ್ದು ಇದು ಮೊಡವೆಗಳನ್ನು ದೂರ ಮಾಡಲು ಸಹಕರಿಸುತ್ತದೆ. ನಿಮ್ಮನ್ನು ಬಹುವಾಗಿ ಕಾಡುವ ಬ್ಲ್ಯಾಕ್ ಹೆಡ್ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ.

ತ್ವಚೆಯ ಮೇಲಿರುವ ಹೆಚ್ಚುವರಿ ಜಿಡ್ಡಿನಂಶವನ್ನು ಇದು ಹೀರಿಕೊಂಡು ಮುಖದ ಕಾಂತಿ ಹೆಚ್ಚುವಂತೆ ಮಾಡುತ್ತದೆ. ಬಿಸಿಲಿಗೆ ಹೋಗಿ ನಿಮ್ಮ ತ್ವಚೆ ಕಪ್ಪಾಗಿದ್ದರೆ ಅದನ್ನು ಸರಿಮಾಡುತ್ತದೆ. ತ್ವಚೆಯನ್ನು ಪೋಷಿಸಿ ಮತ್ತೆ ಹೊಳಪನ್ನು ಮರುಕಳಿಸುವಂತೆ ಮಾಡುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದನ್ನು ವಾರಕ್ಕೆರಡು ಬಾರಿಯಂತೆ ನಿಯಮಿತವಾಗಿ ತಲೆಗೆ ಹಚ್ಚಿಕೊಳ್ಳುವುದರಿಂದ ತಲೆಹೊಟ್ಟಿನ ಸಮಸ್ಯೆ ದೂರವಾಗುತ್ತದೆ. ಕೂದಲು ಉದುರುವಿಕೆ ನಿಲ್ಲುತ್ತದೆ. ತಲೆಹೊಟ್ಟಿನ ಸಮಸ್ಯೆಗೂ ಮುಕ್ತಿ ದೊರೆಯುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular