ಪೆಟ್ರೋಲ್​ ಬಂಕ್ ​ನಲ್ಲಿ ಪಂಜಾಬಿ ಹಾಡು: ಮನಸೋತ ಗ್ರಾಹಕರು

ಪಂಜಾಬಿ ಹಾಡುಗಳು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿವೆ ಮತ್ತು ಆ ಸತ್ಯವನ್ನು ಅಲ್ಲಗಳೆಯುವಂತಿಲ್ಲ. ಹೆಚ್ಚಿನ ಪಂಜಾಬಿ ಟ್ರ್ಯಾಕ್‌ಗಳು ಆಕರ್ಷಕ ಸಂಗೀತವನ್ನು ಒಳಗೊಂಡಿದ್ದು, ಇವು ಮನರಂಜನೆಯನ್ನು ನೀಡುತ್ತವೆ.

ಎಲ್ಲಿಯೇ ಪಂಜಾಬಿ ಹಾಡುಗಳನ್ನು ಕೇಳಿದರೆ ಎಂಥವರೂ ಅರೆಕ್ಷಣ ತಲೆ, ಕಾಲು ಅಲ್ಲಾಡಿಸುತ್ತಾರೆ. ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ.

ಪೆಟ್ರೋಲ್ ಪಂಪ್‌ನಲ್ಲಿರುವ ಎಲ್ಇಡಿ ಡಿಸ್ಪ್ಲೇ ಬೋರ್ಡ್​ನಲ್ಲಿ ಎ.ಪಿ. ಧಿಲ್ಲೋನ್ ಅವರ ಪಂಜಾಬಿ ಹಾಡನ್ನು ಹಾಕಲಾಗಿತ್ತು. ಆಗ ಪೆಟ್ರೋಲ್​ ಹಾಕಲು ಬಂದ ಜನರು ಕಾಲು ಅಲ್ಲಾಡಿಸುವಂತಾಗಿತ್ತು.

ಕುತೂಹಲದ ವಿಷಯವೇನೆಂದರೆ, ಪೆಟ್ರೋಲ್​ ಬಂಕ್​ನ ಡಿಸ್ಪ್ಲೇ ಬೋರ್ಡ್​ನಲ್ಲಿ ಈ ಹಾಡಿನ ಸಾಹಿತ್ಯವನ್ನು ತೋರಿಸಲಾಗುತ್ತಿತ್ತು. ಈಗ ವೈರಲ್ ಆಗಿರುವ ವೀಡಿಯೊವನ್ನು ಮೂಲತಃ ವೇಕ್‌ಅಪ್‌ಸಿಂಗ್ ಎಂಬ ಬಳಕೆದಾರರು Instagram ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಸಗ್ರಿಕಾ ಎಂಬ ಬಳಕೆದಾರರು ಮರುಹಂಚಿಕೊಂಡಿದ್ದಾರೆ.

https://youtu.be/WqSxWYSv8YM

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read