HomeKarnatakaಥಣಿಸಂದ್ರ ಒತ್ತುವರಿ ತೆರವು: ಬಿಡಿಎ ಹೇಳಿದ ಸತ್ಯಗಳು

ಥಣಿಸಂದ್ರ ಒತ್ತುವರಿ ತೆರವು: ಬಿಡಿಎ ಹೇಳಿದ ಸತ್ಯಗಳು

ಬೆಂಗಳೂರು ನಗರದಲ್ಲಿ ಕೋಗಿಲು ಬಳಿಕ ಥಣಿಸಂದ್ರ ಒತ್ತುವರಿ ತೆರವು ಕಾರ್ಯಾಚರಣೆ ಕುರಿತು ಚರ್ಚೆಗಳು ನಡೆಯತ್ತಿವೆ. ಥಣಿಸಂದ್ರ ಒತ್ತುವರಿ ತೆರವುಗೊಳಿಸುವಿಕೆ ಕುರಿತಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮಾಹಿತಿಯನ್ನು ನೀಡಿದೆ.

ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಇದನ್ನು ಹಂಚಿಕೊಂಡಿದ್ದಾರೆ. ತೆರವು, ಮಾಲೀಕರಿಗೆ ಪರಿಹಾರದ ಕುರಿತು ವಿವರಗಳು ಇದಲ್ಲಿವೆ.

  • ಭೂಮಿಯನ್ನು ಅರ್ಕಾವತಿ ಲೇಔಟ್‌ಗಾಗಿ ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಪೂರ್ವಭಾವಿ ಅಧಿಸೂಚನೆಯನ್ನು 03.02.2003 ರಂದು ಮತ್ತು ಅಂತಿಮ ಅಧಿಸೂಚನೆಯನ್ನು 23.02.2004ರಂದು ಹೊರಡಿಸಲಾಗಿತ್ತು.
  • ಒಂದು ಸುತ್ತಿನ ಒತ್ತುವರಿಯನ್ನು ತೆರವುಗೊಳಿಸಿ, ಆಸ್ತಿ ಒಡೆತನವನ್ನು 10.11.2004ರಂದು ಪಡೆಯಲಾಗಿದೆ.
  • ಭೂ ಮಾಲೀಕರು ಪರಿಹಾರವನ್ನು ಪಡೆದುಕೊಂಡಿದ್ದಾರೆ.
  • 2014ರಲ್ಲಿ ಈ ಬಗ್ಗೆ ಹೈಕೋರ್ಟ್ ವಿವರವಾದ ಆದೇಶವನ್ನು ಹೊರಡಿಸಿದೆ.
  • 2021ರಲ್ಲಿ ಅರ್ಕಾವತಿ ಲೇಔಟ್‌ಗೆ ಸಂಬಂಧಿಸಿ ಮಾನ್ಯ ಹೈಕೋರ್ಟ್ ಸಾಮಾನ್ಯ ಆದೇಶವನ್ನು ಹೊರಡಿಸಿದೆ.

ಇದರ ಹೊರತಾಗಿಯೂ, ಭೂಮಾಲೀಕರು ಅಕ್ರಮವಾಗಿ ಮತ್ತು ವಂಚಿಸಿ ಸೈಟ್‌ಗಳನ್ನು ಮಾರಾಟ ಮಾಡಿದ್ದಾರೆ. 33 ಸೈಟ್ ಖರೀದಿದಾರರು ನ್ಯಾಯಾಲಯ ನೇಮಿಸಿದ ಕೇಶವನಾರಾಯಣ ಸಮಿತಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಮಿತಿಯು ನೋಟಿಸ್ ನೀಡಿ, ಅವಕಾಶ ನೀಡಿ, ವಿಚಾರಣೆ ನಡೆಸಿ, ಅವುಗಳನ್ನು ಅಕ್ರಮ ಎಂದು 16.02.2023ರಂದು ಘೋಷಿಸಿ, ಬಿಡಿಎಗೆ ಒಡೆತನ ಪಡೆಯುವಂತೆ ನಿರ್ದೇಶನ ನೀಡಿದೆ. ಸೈಟ್ ಮಾಲೀಕರು ಅಕ್ರಮವಾಗಿ ಶೆಡ್‌ಗಳನ್ನು ನಿರ್ಮಿಸಿದ್ದಾರೆ. ಮಾಲೀಕರು ಅಲ್ಲಿ ವಾಸಿಸುತ್ತಿರಲಿಲ್ಲ. ಮಾಲೀಕರು ಶೆಡ್‌ಗಳನ್ನು ಬಾಡಿಗೆಗೆ ನೀಡಿ ಬಾಡಿಗೆಯನ್ನು ಪಡೆಯುತ್ತಿದ್ದರು.

ಬಿಡಿಎ ಹೇಳುವಂತೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಪರಿಹಾರವನ್ನು ಪಾವತಿಸಲಾಗಿದೆ. ನ್ಯಾಯಾಲಯ ಮತ್ತು ಪರಿಶೀಲನಾ ಸಮಿತಿಯಲ್ಲಿ ಬಿಡಿಎ ಪರವಾಗಿ ವಿಚಾರ ನಿರ್ಧಾರವಾಗಿದೆ.

ಸೈಟ್ ಮಾಲೀಕರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗಿದೆ. ಭೂ ಮಾಲೀಕರು ಬಿಡಿಎಗೆ ಸೇರಿದ ಭೂಮಿಯಲ್ಲಿ ಅಕ್ರಮವಾಗಿ ಶೆಡ್‌ಗಳಿಂದ ಬಾಡಿಗೆ ಸಂಗ್ರಹಿಸುತ್ತಿದ್ದ ಬಗ್ಗೆ ಆದೇಶವನ್ನೂ ಹೊರಡಿಸಲಾಗಿದೆ.

ಏನಿದು ಕಾರ್ಯಾಚರಣೆ?: ಬಿಡಿಎ ಬೆಂಗಳೂರು ಪೂರ್ವ ತಾಲ್ಲೂಕಿನ ಥಣಿಸಂದ್ರ ಗ್ರಾಮದ ಸರ್ವೆ ನಂ. 28/1 ಮತ್ತು 28/2ರ 2 ಎಕರೆ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಮನೆ, ಗೋದಾಮು ಹಾಗೂ ಗ್ಯಾರೇಜ್‌ಗಳನ್ನು ತೆರವುಗೊಳಿಸಿ, ಕೋಟ್ಯಂತ ರೂಪಾಯಿ ಮೌಲ್ಯದ ಜಾಗವನ್ನು ವಶಪಡಿಸಿಕೊಂಡಿದೆ. ಆದರೆ ಈ ಕಾರ್ಯಾಚರಣೆ ಬಗ್ಗೆ ಜನರು ಹಲವು ಆರೋಪಗಳನ್ನು ಮಾಡುತ್ತಿದ್ದಾರೆ.

ಈ ಕಾರ್ಯಾಚರಣೆ ಬಳಿಕ ಜಾಗದಲ್ಲಿ ಮನೆ ಕಳೆದುಕೊಂಡವರ ಮನೆ ಬಳಕೆಯ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಸುಮಾರು 40 ಕುಟುಂಬಗಳು ಇಲ್ಲಿ ಬೀದಿಗೆ ಬಿದ್ದಿವೆ. ಕೋಗಿಲು ಬಡಾವಣೆ ಮಾದರಿಯಲ್ಲಿ ನಮಗೂ ಮನೆಗಳನ್ನು ಕೊಡಿ ಎಂದು ಜನರು ಬೇಡಿಕೆ ಇಟ್ಟಿದ್ದಾರೆ.

ಜನರು 30 ವರ್ಷಗಳಿಂದ ನಾವು ಇಲ್ಲಿ ವಾಸಿಸುತ್ತಿದ್ದೇವೆ. ಮಹಾನಗರ ಪಾಲಿಕೆಗೆ ತೆರಿಗೆ ಕಟ್ಟುತ್ತಿದ್ದೇವೆ. ಏಕಾಏಕಿ ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ. ಈ ಜಾಗದ ಕುರಿತು ಸರ್ಕಾರದ ಮಟ್ಟದಲ್ಲಿ ಯಾವ ತೀರ್ಮಾನವಾಗಿದೆ ಎಂಬುದನ್ನು ಬಹಿರಂಗಗೊಳಿಸಿ ಎಂದು ಆಗ್ರಹಿಸಿದ್ದಾರೆ.

2ನೇ ದಿನದ ತೆರವು ಕಾರ್ಯಾಚರಣೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಆದ್ದರಿಂದ ಪೊಲೀಸ್ ಭದ್ರತೆಯಲ್ಲಿ ಬಿಡಿಎ ಅಧಿಕಾರಿಗಳು ಕಾರ್ಯಾಚರಣೆಯನ್ನು ನಡೆಸಿದರು. ತೆರವು ಮಾಡುವ ಮೊದಲು ನಮಗೆ ಯಾವುದೇ ನೋಟಿಸ್ ನೀಡಿಲ್ಲ ಎಂದು ಅಧಿಕಾರಿಗಳ ವಿರುದ್ಧ ಜನರು ಆಕ್ರೋಶವನ್ನು ವ್ಯಕ್ತಪಡಿಸಿದರು.

2 ಎಕರೆ ಜಾಗವನ್ನು ಕೇಶವ ನಾರಾಯಣ ಸಮಿತಿ ವರದಿ ಆಧಾರಿಸಿ ತೆರವುಗೊಳಿಸಲು ಕರ್ನಾಟಕ ಹೈಕೋರ್ಟ್ ಸೂಚಿಸಿತ್ತು. ಹೈಕೋರ್ಟ್ ಆದೇಶದ ಬಳಿಕ ಬಿಡಿಎ ಅಧಿಕಾರಿಗಳು ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ ಇದಕ್ಕೆ ವಿರೋಧ ವ್ಯಕ್ತವಾಗುತ್ತಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular